ಕರ್ನಾಟಕದಲ್ಲಿಂದು 5,324 ಹೊಸ ಕೊರೊನಾಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು 1 ಲಕ್ಷ ಗಡಿ ದಾಟಿದೆ
ದಕ್ಷಿಣ ಕನ್ನಡದಲ್ಲಿ ಇಂದು 119 ಪಾಸಿಟಿವ್ ದಾಖಲಾಗಿದೆ.
ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 61,819 ಇದ್ದು ಇದುವರೆಗೂ 37,685 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಫಲಿಸದೇ ಇಂದು 75 ಜನ ಸಾವನ್ನಪ್ಪಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,953 ಕ್ಕೆ ಏರಿಕೆಯಾಗಿದೆ.