ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಶುಭದಾ ರೈಯವರು ಕಡಬ ತಾಲೂಕು ಪಂಚಾಯತ್ ವ್ಯಾಪ್ತಿಗೆ ಸೇರಿರುವುದರಿಂದ ತೆರವಾಗಿರುವ ಇಲ್ಲಿಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷ ತೆಗೆ ಅರಂತೋಡು ಕ್ಷೇತ್ರದ ತಾ.ಪಂ.ಸದಸ್ಯೆ ಪುಷ್ಪಾ ಮೇದಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ನೂತನ ತಾ.ಪಂ.ಉಪಾಧ್ಯಕ್ಷೆಯಾಗಿ ಪುಷ್ಪಾ ಮೇದಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಚುನಾವಣಾಧಿಕಾರಿ ಯಾಗಿದ್ದರು. ಸುಳ್ಯ ತಹಶೀಲ್ದಾರ್ ಅನಂತಶಂಕರ್, ತಾ.ಪಂ. ಇ.ಒ. ಭವಾನಿಶಂಕರ್ ಸಹಕರಿಸಿದರು. ಆರ್.ಐ. ಕೊರಗಪ್ಪ ಹೆಗ್ಡೆ, ತಾ.ಪಂ. ಮೆನೇಜರ್ ಹರೀಶ್, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯರುಗಳಾದ ಅಬ್ದುಲ್ ಗಫೂರ್ ಕಲ್ಮಡ್ಕ, ತೀರ್ಥರಾಮ ಬಾಳಾಜೆ, ಪದ್ಮಾವತಿ ಕುಡೆಂಬಿ, ವಿದ್ಯಾಲಕ್ಷ್ಮೀ ಎರ್ಮೆಟ್ಟಿ, ಯಶೋದ ಬಾಳೆಗುಡ್ಡೆ ಈ ಸಂದರ್ಭದಲ್ಲಿ ಇದ್ದರು.
- Tuesday
- December 3rd, 2024