
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಸಮಸ್ಯೆ, ಕುಡಿಯುವ ನೀರು ಸಮಸ್ಯೆ ಬಗ್ಗೆ ಕೈ ಗೊಂಡಿರುವ ಕಾರ್ಯ ಯೋಜನೆ ಬಗ್ಗೆ ವಿವರಣೆ ಕೋರಿ ಸುಳ್ಯ ನಗರ ಕಾಂಗ್ರೆಸ್ ಸಮಿತಿ ನಿಯೋಗ ದಿಂದ ಇಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಗೆ ಮನವಿಸಲ್ಲಿಸಿ ಚರ್ಚಿಸಲಾಯಿತು. ನಿಯೋಗ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ ಕೊಯಿಕುಳಿ, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಮಾಜಿ ನಗರ ಪಂಚಾಯತ್ ಸದಸ್ಯರಾದ ಕೆ ಎಂ ಮುಸ್ತಫಾ, ಗೋಕುಲ್ ದಾಸ್, ಬ್ಲಾಕ್ ವಕ್ತಾರ, ನಂದರಾಜ ಸಂಕೇಶ, ಮಾದ್ಯಮ ಸಂಯೋಜಕ ಭವಾನಿ ಶಂಕರ್ ಕಲ್ಮಡ್ಕ, ಶಹೀದ್ ಪಾರೆ, ಗೋಪಾಲಕೃಷ್ಣ ಭಟ್, ಆಶಿಕ್ ಅರಂತೋಡು ಉಪಸ್ಥಿತರಿದ್ದರು.