“ಕಾಡು ಬೆಳೆಸಿ ನಾಡು ಉಳಿಸಿ” ಎಂಬ ಮಾತಿನಂತೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಜುಲೈ 26 ರಂದು ಆದಿತ್ಯವಾರ ವಿಶೇಷ ಕಾರ್ಯಕ್ರಮವೊಂದು ನಡೆಯಿತು.
ಮುಗೇರು ರಕ್ಷಿತಾರಣ್ಯದಲ್ಲಿ ಹಲಸಿನ ಬೀಜ ,ಮಾವಿನ ಬೀಜ ಹಾಗೂ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗುತ್ತಿದ್ದು, ಕಾಡನ್ನು ಉಳಿಸುವ ನಿಟ್ಟಿನಲ್ಲಿ ಯುವಕ ಮಂಡಲ ವತಿಯಿಂದ ಈ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದ ಯಶಸ್ಸಿಗಾಗಿ ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಧರ ಕುತ್ಯಾಳ, ಯುವಕ ಮಂಡಲದ ಪೂರ್ವ ಅಧ್ಯಕ್ಷರಾದ ಹೇಮಂತ್ ಮಠ, ನೇತ್ರ ಕುಮಾರ ಪೇರೋಲಿ, ಗಂಗಾಧರ ಮಾಣಿಕೊಡಿ, ಹರಿಪ್ರಸಾದ ಮಾಣಿಕೊಡಿ, ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ್ ಕಾರಿಂಜ, ಕಾರ್ಯದರ್ಶಿಗಳಾದ ಬಾಲಚಂದ್ರ ನೆಡೀಲು ಅದೇ ರೀತಿ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೈ ಜೋಡಿಸಿದರು.