
ಬೆಳ್ಳಾರೆಯಿಂದ ಕೇರಳಕ್ಕೆ ಬೆಳ್ಳಂಬೆಳಗ್ಗೆ ಅಕ್ರಮ ಗೋವು ಸಾಗಾಟದ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಕಾರ್ಯಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ವಾಹನ ಸಹಿತ ಸಂಪ್ಯ ಪೋಲೀಸರಿಗೊಪ್ಪಿಸಿದ ಘಟನೆ ಇಂದು ವರದಿಯಾಗಿದೆ.
ಬೆಳಗ್ಗೆ ಸುಮಾರು ಮೂರು ಗಂಟೆಗೆ ಸುಳ್ಯತಾಲೂಕಿನ ಬೆಳ್ಳಾರೆ ಭಾಗದಿಂದ ಸುಮಾರು ಐದು ಆರು ದನಗಳನ್ನು ಪಿಕಾಪ್ ವಾಹನದಲ್ಲಿ ಕೈ ಕಾಲುಗಳನ್ನುಕಟ್ಟಿ ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾಗಿದೆ . ಗೋವು ಸಾಗಾಟದ ಪ್ರಮುಖ ಆರೋಪಿ ಸಿದ್ದೀಕ್ ಬೂಡು ಬೆಳ್ಳಾರೆ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.
