Ad Widget

ಅಯುಷ್ಮಾನ್ ಭಾರತ್ ಯೋಜನೆ ನೋಂದಾವಣೆ -ಜನತೆಯ ಸೇವೆ ಮಾಡಲು ಕಾರ್ಯಕರ್ತರಿಗೆ ಜಯಪ್ರಕಾಶ್ ರೈ ಕರೆ

ಇಂದಿರಾ-ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆಯ ಉಮಿಕ್ಕಳದಲ್ಲಿ ಜುಲೈ 25 ರಂದು ಅಯುಷ್ಮಾನ್ ಭಾರತ್ ಯೋಜನೆ ನೋಂದಾವಣೆ ನಡೆಯಿತು.‌ ಉದ್ಘಾಟನೆ ಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ನೇರವೇರಿಸಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ,ಇದೊಂದು ಅದ್ಭುತ ಕಾರ್ಯ, ಈ ಯೋಜನೆಯನ್ನು ಸುಳ್ಯ ಬ್ಲಾಕ್ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು. ಬ್ಲಾಕ್ ಕಾಂಗ್ರೆಸ್ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ಯೋಜನೆ ಪ್ರತಿ ಮನೆ ಮನೆಗೆ ತಲುಪಲಿ ಎಂದರು.

. . . . . . . . .

ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಪಿಸಿಸಿ ಸುಳ್ಯ ಉಸ್ತುವಾರಿ ಕೃಷ್ಣಪ್ಪ ಮಾತನಾಡಿ ರಾಜ್ಯದಲ್ಲಿಯೇ ಪ್ರಥಮ ಕಾರ್ಯ ಇಲ್ಲಿ ನಡೆದಿದೆ ಎಂದರು. ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಪ್ರಾ.ಕ್ರ. ಪ.ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಾರೆ ತಾಲೂಕು ಪಂಚಾಯತ್ ಸದಸ್ಯೆ ನಳಿನಾಕ್ಷಿ, ಸಾಮಾಜಿಕ ಜಾಲತಾಣದ ಸುಳ್ಯ ಪ್ರಮುಖ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಆನಂದ ಬೆಳ್ಳಾರೆ, ಒವಿನ್ ಪಿಂಟೋ, ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಮಂಗಳ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್, ಬೆಳ್ಳಾರೆ ಸಹಕಾರಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಅಬೂಬಕ್ಕರ್ ಶೂಬಿಝ್, ಕಾರ್ಯಕ್ರಮ ಉಸ್ತುವಾರಿಗಳಾದ ಹಮೀದ್ ಎಚ್ ಎಂ, ಅಬ್ದುಲ್ ಕುಂಞ ಉಪಸ್ಥಿತಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading