ಸುಳ್ಯದ ನ್ಯಾಯವಾದಿಯಾಗಿರುವ ಧರ್ಮಪಾಲ ಕೊಯಿಂಗಾಜೆ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೋಟರಿ ವಕೀಲರನ್ನಾಗಿ ಭಾರತ ಸರಕಾರ ನೇಮಕ ಮಾಡಿದೆ . ಇವರು ಸುಳ್ಯದಲ್ಲಿ ವಕೀಲ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸ ಹಿ ಪ್ರಾ ಶಾಲೆ ಕೋಲ್ಚಾರು , ಪ್ರೌಡ ಶಿಕ್ಷಣವನ್ನು ಸ. ಪ್ರೌಡ ಶಾಲೆ ಅಜ್ಜಾವರ , ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು , ಕಾನೂನು ಪದವಿಯನ್ನು ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ , ಸ್ನಾತಕೋತ್ತರ ಕಾನೂನು ಪದವಿಯನ್ನು ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಪೂರೈಸಿರುತ್ತಾರೆ . ಇವರು ತಮ್ಮ ವೃತ್ತಿ ಜೀವನವನ್ನು ಸುಳ್ಯದಲ್ಲಿ ಆರಂಭಿಸಿ ಕಿರಿಯ ವಕೀಲರಾಗಿ ಎಂ ವೆಂಕಪ್ಪ ಗೌಡ ಮತ್ತು ನಾರಾಯಣ ಕೆ ಇವರ ಬಳಿ ಕರ್ತವ್ಯ ನಿರ್ವಹಿಸಿದ್ದರು. ಇವರು ಕೆವಿಜಿ ಕಾನೂನು ಕಾಲೇಜು ಇದರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ , ಯುವಜನ ಸಯುಂಕ್ತ ಮಂಡಳಿ ಇದರ ಮಾಜಿ ನಿರ್ದೇಶಕರಾಗಿ , ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಅತಿಥಿ ಉಪನ್ಯಾಸಕರಾಗಿ ಹಾಗು ವಿವಿದ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ . ಪ್ರಸ್ತುತ ಇವರು ಈಗ ಸುಳ್ಯ ಬ್ಲಾಕ್ ಕಾಂಗ್ರೆಸ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು , ಇವರು ಅಲೆಟ್ಟಿ ಗ್ರಾಮದ ಕೊಯಿಂಗಾಜೆ ದಿ . ಮಂಜಪ್ಪ ಗೌಡ ಮತ್ತು ಚೆನ್ನಕ್ಕ ದಂಪತಿಯ ಪುತ್ರ.
- Friday
- January 31st, 2025