ಮಂಗಳೂರು – ಮೈಸೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮಿಸ್ ಕಾಲ್ ಕೊಟ್ಟ ಮೈಸೂರಿನ ದಿಲೀಪ್ ಕುಮಾರ್ ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಸುಳ್ಯ ಪೋಲಿಸರ ವಶಕ್ಕೆ ಪಡೆದ ಘಟನೆ ನಡೆದಿದೆ.
ಕೊರೊನಾ ಮಾರ್ಗಸೂಚಿ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ವಿಳಾಸ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕಂಡೆಕ್ಟರ್ ತೆಗೆದುಕೊಳ್ಳಬೇಕಾಗುತ್ತದೆ. ಕಂಡಕ್ಟರ್ ನಂಬರ್ ತೆಗೆದುಕೊಳ್ಳುವ ವೇಳೆ ಹಿಂಬದಿ ಶೀಟಿನಲ್ಲಿ ಕುಳಿತಿದ್ದ 45 ವರ್ಷದ ವ್ಯಕ್ತಿ ದುರುಪಯೋಗ ಪಡಿಸಿಕೊಂಡು ಆ ಯುವತಿ ಹೇಳಿದ ನಂ ದಾಖಲಿಸಿಕೊಂಡು ನಂತರ ಪದೇ ಪದೆ ಮಿಸ್ ಕಾಲ್ ಕೊಟ್ಟು ಯುವತಿಗೆ ಕಿರಿಕಿರಿ ಮಾಡುತ್ತಿದ್ದನೆನ್ನಲಾಗಿದೆ.
ಹಿಂದಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಯುವತಿ ಕರೆ ಮಾಡಿದ್ದಾಳೆ, ಆತನೇ ತನಗೆ ಪದೇ ಪದೆ ಮಿಸ್ ಕಾಲ್ ಕೊಡುತ್ತಿರುವುದೆಂದು ತಿಳಿದು ಕಂಡೆಕ್ಟರ್ ಜೊತೆ ವಿಷಯ ತಿಳಿಸಿದ್ದಾಳೆ , ಬಸ್ ಜಾಲ್ಸೂರು ತಲುಪುತ್ತಿದ್ದಂತೆ ಕಂಡೆಕ್ಟರ್ ಸುಳ್ಯ ಡಿಪೋ ಮೆನೇಜರ್ ಗೆ ತಿಳಿಸಿದ್ದಾರೆ,ಅವರು ಸುಳ್ಯ ಪೋಲಿಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುಳ್ಯ ಬಸ್ಸು ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಆ ವ್ಯಕ್ತಿಯನ್ನು ವಶಕ್ಕೆ ಪಡೆದರು. ಯುವತಿ ದೂರು ನೀಡದ ಕಾರಣ ಪೋಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ