ಕಳೆದ ಹಲವು ವರ್ಷಗಳಿಂದ ಮಂಜೂರಾತಿ ಆಗಿ ಕೆಲಸ ಮಾಡದೆ ಬಾಕಿಯಿದ್ದ ಮನೆಗಳಿಗೆ ಕೆಲವು ತಿಂಗಳ ಹಿಂದೆ ಲಾಕ್ ತೆರವುಗೊಳಿಸಿ ಆದೇಶ ಮಾಡಿದ್ದು ಈ ಸಂದರ್ಭ ತಾಲೂಕಿನ ಹಲವು ಕಡೆ 30 ಕ್ಕೂ ಹೆಚ್ಚು ಮನೆ ನಿರ್ಮಾಣ ಅಗಿದ್ದು ಸಂಪಾಜೆ ಗ್ರಾಮದಲ್ಲೂ 6 ಬಡವರು ಹೊಸದಾಗಿ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿ ತಿಂಗಳು ಕಳೆದರೂ ಹಣ ಬಿಡುಗಡೆ ಆಗಿಲ್ಲ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಸಾಲ ಮಾಡಿ ಮನೆ ಪಂಚಾಂಗ ಮಾಡಿದವರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಹಾಗೂ ಕಳೆದ 2018-19 ನೇ ಸಾಲಿನಲ್ಲಿ ಯಾವುದೇ ಯೋಜನೆಯಡಿ ಮನೆ ನಿರ್ಮಾಣಕೆ ಅನುದಾನ ಮಂಜೂರಾತಿ ಇಲ್ಲ . 2020- 21 ನೇ ಸಾಲಿಗೆ ಅನುದಾನ ಇಲ್ಲ. ದಿನ ಬೆಳಗಾದರೆ ಕೋಟಿ ಕೋಟಿ ಆಶ್ವಾಸನೆಯನ್ನು ನೀಡುವ ಜನಪ್ರತಿನಿಧಿಗಳು ಅದಕ್ಕೆ ಸಾಥ್ ಕೊಡುವ ಅಧಿಕಾರಿಗಳು ಕೂಡಲೇ ಅನುದಾನ ನೀಡಬೇಕು ಸ್ಥಳೀಯ ಶಾಸಕರು ಕೂಡಲೇ ವಸತಿ ಸಚಿವರ ಗಮನಕ್ಕೆ ತಂದು ಈಗಾಗಲೇ ಪಂಚಾಂಗ ಮಾಡಿರುವ ಬಡವರ ಮನೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಬೇಕು. ಹಾಗೂ 2 ವರ್ಷ ಗಳಿಂದ ಯಾವುದೇ ಯೋಜನೆಯ ಮನೆಗಳು ಮಂಜೂರಾತಿ ಆಗಿಲ್ಲ ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸರಕಾರದ ಮಟ್ಟದಿಂದ ಮಂಜೂರಾತಿ ಮಾಡಿಸಿಕೊಡಬೇಕಾಗಿ ಆಗ್ರಹಿಸುತೇನೆ. ತಾಲ್ಲೂಕಿನ ಆಡಳಿತ ಮನೆ ಪಂಚಾಂಗ ಮಾಡಿಸಲು ಹಾಕಿದ ಒತ್ತಡ ಪಂಚಾಂಗ ಅದ ಮೇಲೆ ಹಣ ಬಿಡುಗಡೆ ಮಾಡುವಲ್ಲಿ ತೋರಿಸಬೇಕು, ಬಡವರು ಚಿನ್ನ ಅಡವಿಟ್ಟು ,ಬ್ಯಾಂಕ್ ಗಳಿಂದ ಸಾಲ ಪಡೆದು ಪಂಚಾಂಗ ಹಾಕಿರುದನ್ನು ತಮ್ಮ ಗಮನಕ್ಕೆ ತರುತಿದ್ದೇವೆ ಅನುದಾನ ಈ ಕೂಡಲೇ ಬಿಡುಗಡೆ ಗೊಳಿಸುವರೇ ಅಧಿಕಾರಿಗಳಲ್ಲಿ ಅಗ್ರಹಿಸುತೇನೆ ಎಂದು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
- Thursday
- November 28th, 2024