ಸುಳ್ಯ ನ ಪಂ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಜನತೆಗೆ ನೀಡಿದ ಆಶ್ವಾಸನೆಯನ್ನು ತಮ್ಮ ಛಲದ ಮೂಲಕ ತೋರಿಸಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ಸುಳ್ಯದ ಬೂಡು ವಾರ್ಡಿನಲ್ಲಿ ಅಂಗಡಿಮಠ ಪರಿಸರದಲ್ಲಿ ಸುಮಾರು ಮೂರು ಮನೆಗಳು ರಸ್ತೆ ಸಂಪರ್ಕವಿಲ್ಲದೆ ಭಾರಿ ದೊಡ್ಡ ಜರಿಯ ಮೂಲಕ ತಮ್ಮ ಮನೆಗೆ ಸಂಪರ್ಕಿಸಲು ಸಂಕಷ್ಟ ಪಡುತ್ತಿದ್ದರು. ಇದರಲ್ಲಿ ಒಂದು ಕುಟುಂಬದ ಸದಸ್ಯ ವಿಕಲಚೇತನ ರಾಗಿದ್ದು ಹಲವಾರು ವರ್ಷಗಳಿಂದ ಈ ರಸ್ತೆಯಲ್ಲಿ ನಡೆದಾಡಲು ಕಷ್ಟ ಅನುಭವಿಸುತ್ತಿದ್ದರು. ಕಳೆದ ಬಾರಿಯ ನಗರ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ವಾರ್ಡ್ ಸದಸ್ಯರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ರಿಯಾಜ್ ಕಟ್ಟಿಕಾರ್ ರವರು ತಮ್ಮ ಚುನಾವಣೆಯ ಆಶ್ವಾಸನೆ ಯಲ್ಲಿ ಈ ರಸ್ತೆಯನ್ನು ಸರಿಪಡಿಸಿ ಕೊಡುವುದಾಗಿ ಮಾತು ನೀಡಿದ್ದರು. ಅದರಂತೆ ಈ ರಸ್ತೆಯ ದುರಸ್ತಿಗೆ ಇಳಿದ ಇವರು ಜುಲೈ 23ರಂದು ಕೆಂಪು ಕಲ್ಲು ಬಂಡೆಯಿಂದ ಆವರಿಸಿದ್ದ ಸ್ಥಳವನ್ನು ಜೆಸಿಬಿ ಮೂಲಕ ತಟ್ಟು ಮಾಡಿಸಿ ಸ್ಥಳೀಯರಿಗೆ ನಡೆದಾಡಲು ಯೋಗ್ಯ ರಸ್ತೆಯನ್ನಾಗಿ ಮಾಡಿದರು. ಇದಕ್ಕೂ ಮುನ್ನ ಶಾಸಕ ಅಂಗಾರ ರವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಕರಣಕ್ಕೆ ಶಾಸಕರಿಂದ ಭರವಸೆಯೂ ಲಭಿಸಿರುತ್ತದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಸ್ಥಳೀಯ ನ.ಪಂ ಸದಸ್ಯ ರಿಯಾಝ್ ಕಟ್ಟೆಕಾರ್, ಸ್ಥಳೀಯ ನಿವಾಸಿಗಳಾದ ಪ್ರವೀಣ್ ನಾಯಕ್, ರವಿಚಂದ್ರ, ಗೋಕುಲ್ ಪ್ರಸಾದ್, ಗುರುಪ್ರಸಾದ್, ಕೃಷ್ಣ, ವಾಸುದೇವ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
- Thursday
- November 28th, 2024