Ad Widget

ಸುಳ್ಯ ಶಾಂತಿನಗರ ಪರಿಸರದಲ್ಲಿ ನಡೆದಿದೆ ಎನ್ನಲಾದ ಕೆಂಪು ಕಲ್ಲು ಗಣಿಗಾರಿಕೆ, ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರದ ನಿಯಮಾನುಸಾರ ನಡೆದಿದೆ – ಅಧಿಕಾರಿಗಳಿಂದ ಸ್ಪಷ್ಟನೆ

ಸುಳ್ಯ ಶಾಂತಿನಗರ ಕ್ರೀಡಾಂಗಣದಲ್ಲಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಚಿತ್ರೀಕರಣ ಹರಿದಾಡುತ್ತಿದ್ದವು. ಈ ಘಟನೆಯ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿಯಲ್ಲಿ ಗಣಿಗಾರಿಕೆ ಅಕ್ರಮವೋ! ಸಕ್ರಮವೋ? ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಉತ್ತರಿಸುವಂತೆ ವರದಿ ಪ್ರಕಟಿಸಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳನ್ನು ನಮ್ಮ ಪತ್ರಿಕೆಯ ವರದಿಗಾರರು ಸಂಪರ್ಕಿಸಿದಾಗ ಕ್ರೀಡಾಂಗಣದ ಅಭಿವೃದ್ಧಿಕರಣಕ್ಕೆ ಶಾಂತಿನಗರದ ಸರ್ವೆ ನಂಬರ್ 420/1 ರಲ್ಲಿ 4.40ಎಕ್ರೆ ಪ್ರದೇಶದಲ್ಲಿ ಲ್ಯಾಟರೈಟ್ ಕಲ್ಲು ತೆಗೆದು ಕ್ರೀಡಾಂಗಣದ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಉಪಯೋಗಿಸಲು ಹಾಗೂ ಹೆಚ್ಚುವರಿ ಕಲ್ಲನ್ನು ಸಾಗಾಣಿಕೆ ಮಾಡುವ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಳ್ಯ ಇವರು ಫೆಬ್ರವರಿ 12, 2020 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸಂಬಂಧಿಸಿದಂತೆ 2020 ಮಾರ್ಚ್ 3ರಂದು ಭೂವಿಜ್ಞಾನಿ ರವರು ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ನೀಡಿತ್ತು.
ಇದರ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇದರ ಉಪನಿರ್ದೇಶಕರು, ಸಹಾಯಕ ಯುವಜನ ಸೇವಾ ಕ್ರೀಡಾ ಅಧಿಕಾರಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಳ್ಯ ತಾಲೂಕು ಅಧಿಕಾರಿಗಳಿಗೆ ನಿಯಮಾನುಸಾರ ಕರ್ನಾಟಕ ನಿಯಮಾವಳಿ 1994ರ ತಿದ್ದುಪಡಿ 2016 ನಿಯಮ 3 ಎ ರಂತೆ 5.5.2020 ರಂದು ಅನ್ವಯವಾಗುವಂತೆ 4 .8 .2020ರ ವರೆಗೆ ಮೂರು ತಿಂಗಳ ಅವಧಿಗೆ ಶಾಂತಿನಗರ ಕಸಬಾ ಗ್ರಾಮದ ಸರ್ವೆ ನಂಬರ್ 420/1 ರಲ್ಲಿ4.40 ಎಕ್ರೆ ಪ್ರದೇಶದಲ್ಲಿ ಲ್ಯಾಟರೈಟ್ ಕಲ್ಲು ತೆಗೆದು ಕ್ರೀಡಾಂಗಣದ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಉಪಯೋಗಿಸಲು ಮತ್ತು ಹೆಚ್ಚುವರಿ ಕಲ್ಲನ್ನು ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಲಾಗಿತ್ತು.
ಇದರಂತೆ ಸರ್ಕಾರದಿಂದ ಕ್ರೀಡಾಂಗಣ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಹೊಂದಿದ್ದು ಸುಳ್ಯದ ಖಾಸಗಿ ವ್ಯಕ್ತಿಯೋರ್ವರು ಇದರ ಗುತ್ತಿಗೆಯನ್ನು ಪಡೆದು ಈಗಾಗಲೇ ಕೆಲಸವನ್ನು ಆರಂಭಿಸಿರುತ್ತಾರೆ.ಇಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಕಾರ್ಯ ನಡೆದು ಬಂದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಪತ್ರಿಕೆಗೆ ಹೇಳಿಕೆಯನ್ನು ನೀಡಿರುತ್ತಾರೆ.

. . . . . . .


ಘಟನೆಯ ಕುರಿತು ಸುಳ್ಯ ಕ್ರೀಡಾ ಇಲಾಖೆ ಯೋಜನಾಧಿಕಾರಿ ದೇವರಾಜ್ ಮುತ್ಲಾಜೆಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕ್ರೀಡಾಂಗಣ ಅಭಿವೃದ್ಧಿಕರಣಕ್ಕಾಗಿ ಸರ್ಕಾರದಿಂದ ಈಗಾಗಲೇ ಒಂದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಗೊಂಡಿದ್ದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಪೂರ್ವ ಅನುಮತಿ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸ್ಥಳೀಯರು ದೂರಿ ಕೊಳ್ಳುವಂತೆ ಸ್ಥಳದಿಂದ ಕಲ್ಲು ಸಾಗಾಣಿಕೆಯ ಸಂದರ್ಭದಲ್ಲಿ ರಸ್ತೆಗಳು ಹಾನಿಯಾದಲ್ಲಿ ಮುಂದಿನ ದಿನಗಳಲ್ಲಿ ಯೋಜನೆಯ ಪ್ರಕಾರ ಈ ಭಾಗದ ರಸ್ತೆಯ ಅಭಿವೃದ್ಧಿಕರಣವೂ ಕೂಡ ನಡೆಯಲಿದೆ. ಸಾರ್ವಜನಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿರುತ್ತಾರೆ.
ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ರವರನ್ನು ಸಂಪರ್ಕಿಸಿದಾಗ ಸರ್ಕಾರದ ಗಮನಕ್ಕೆ ತಂದು ಕ್ರೀಡಾಂಗಣದ ಅಭಿವೃದ್ಧಿಕರಣ ನಡೆಯುತ್ತಿದೆ. ಅದಲ್ಲದೆ ಯಾವುದೇ ಅನುಮತಿ ಪಡೆದುಕೊಳ್ಳದೆ ಇಷ್ಟು ದೊಡ್ಡ ಕೆಲಸ ಕಾರ್ಯಕ್ಕೆ ಮುಂದಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಗುತ್ತಿಗೆ ವಹಿಸಿಕೊಂಡ ನವೀನ್ ರೈ ಮೇನಾಲ ರನ್ನು ಸಂಪರ್ಕಿಸಿದಾಗ ನಾವು ಕಾನೂನು ಪ್ರಕಾರವಾಗಿ ಕ್ರೀಡಾ ಇಲಾಖೆಯ ಮುಖಾಂತರ ಗಣಿಗಾರಿಕಾ ಇಲಾಖೆಯಿಂದ ಗುತ್ತಿಗೆ ವಹಿಸಿಕೊಂಡಿದ್ದೇವೆ. ಮೈದಾನವನ್ನು ಸಮತಟ್ಟು ಮಾಡಲು ಕೆಂಪು ಕಲ್ಲು ತೆಗೆಯಬೇಕಾಗಿದ್ದು , ಅದನ್ನು ಮೈದಾನದ ಕಂಪೌಂಡ್ ಬಳಕೆಗೆ ಉಪಯೋಗಿಸಲಾಗುತ್ತದೆ. ಹಾಗೂ ಹೆಚ್ಚುವರಿ ಕಲ್ಲನ್ನು ತಲಾ ರೂ 3 ರಂತೆ ಸರಕಾರಕ್ಕೆ ಪಾವತಿಸಿ ಮಾರಾಟ ಮಾಡಲು ಅವಕಾಶವಿದೆ. ಮೈದಾನವನ್ನು ನಾವು ಸಮತಟ್ಟು ಮಾಡಿಕೋಡಬೇಕಾಗಿದೆ. ಕಲ್ಲು ಸಾಗಾಟದಿಂದಾಗಿ ರಸ್ತೆಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಷ್ಟೂ ಮೊತ್ತದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭದ ವೇಳೆ ಲಾಕ್ ಡೌನ್ ಇದ್ದರಿಂದ ಗುದ್ದಲಿಪೂಜೆ ನಡೆಸಲಾಗಲಿಲ್ಲ. ಆದ್ದರಿಂದ ಮಾಧ್ಯಮಗಳಿಗೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿಕೆ.
ಅದರೇ ಮಾಧ್ಯಮಗಳಿಗಾದರೂ ಒಂದು ಹೇಳಿಕೆಯನ್ನಾದರೂ ಅಧಿಕಾರಿಕಾರಿಗಳು ,ಜನಪ್ರತಿಧಿಗಳು ತಿಳಿಸಿದ್ದರೆ ಅದು ಸಾರ್ವಜನಿಕರಿಗೂ ಮಾಹಿತಿ ಸಿಗುತ್ತಿತ್ತು. ಏನೇ ಆಗಲಿ ಬೃಹತ್ ಮೊತ್ತದ ಅನುದಾನ ಸದುಪಯೋಗವಾಗಿ ಉತ್ತಮ ಟ್ರ್ಯಾಕ್ ನಿರ್ಮಾಣವಾಗಿ ಸುಳ್ಯದ ಕ್ರೀಡಾಪಟುಗಳ ಬೆಳವಣಿಗೆಗೆ ಕಾರಣವಾಗಲಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!