ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಾರ್ಯವ್ಯಾಪ್ತಿ ಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದ ಅಬೂಬಕ್ಕರ್ ಮುಸ್ಲಿಯಾರ್ ಎಂಬ ವ್ಯಕ್ತಿಯು ಕೇರಳ ಕರ್ನಾಟಕದ ಕೆಲವು ಭಾಗಗಳಲ್ಲಿ ಮದ್ರಸಾ ಅದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಇವರು ಅನೇಕ ಕಡೆಗಳಲ್ಲಿ ವಿವಿದ ಪ್ರಕರಣಗಳಲ್ಲಿ ಪೋಲಿಸರಿಗೆ ಸಿಕ್ಕಿ ಬಿದ್ದು ಜೈಲು ಶಿಕ್ಷೆಯನ್ನು ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಯಾಗಿದ್ದು ಇದೀಗ ಮತ್ತೊಮ್ಮೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿ ಪೊಲೀಸರ ಅತಿಥಿಯಾದ ವಿಷಯ ವಾರ್ತಾ ಮಾದ್ಯಮಗಳ ಮುಖಾಂತರ ತಿಳಿದು ಬಂದಿರುತ್ತದೆ
ಇದು ಸಮುದಾಯದ ಗೌರವಕ್ಕೆ ಮತ್ತು ನಾಡಿನ ಘನತೆಗೆ ದಕ್ಕೆಯಾದ ವಿಚಾರವಾದುದರಿಂದ ಜಮಾಅತ್ ಆಡಳಿತ ಮಂಡಳಿಯು ತುರ್ತಾಗಿ ಆನ್ಲೈನ್ ಮುಕಾಂತರ ಸಬೆ ನಡಸಿ ಸದ್ರಿ ವ್ಯಕ್ತಿಯನ್ನು ಜಮಾಅತ್ ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಮೇಲಿನ ವಿಷಯಕ್ಕೆ ಸಂಬದಿಸಿ
ಕೆಲವು ವಾರ್ತಾ ಮಾದ್ಯಮಗಳಲ್ಲಿ ಅರೋಪಿಯು ಗೂನಡ್ಕ ಮದ್ರಸಾ ಅದ್ಯಾಪಕ ಎಂಬಂತೆ ವರದಿಗಳು ಪ್ರಕಟವಾಗಿದ್ದು ಇದು ಸಾರ್ವಜನಿಕರಲ್ಲಿ ತಪ್ಪು ಅಬಿಪ್ರಾಯ ಮೂಡಿದೆ
ಆದುದರಿಂದ ಮಾದ್ಯಮಗಳು ಸರ್ವಜಾನಿಕರಿಗೆ ತಪ್ಪು ಸಂದೇಶ ರವಾನೆಯಾಗದಂತೆ ವರದಿಗಳನ್ನು ಪ್ರಕಟಿಸಲು ವಾರ್ತಾ ಮಾದ್ಯಮದವರಲ್ಲಿ ವಿನಂತಿಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿರುವ ಜಮಾತ್ ಕಮಿಟಿಯು ಆರೋಪಿಯು
ಹಲವಾರು ವರ್ಷಗಳಿಂದ ಅಪರೂಪವಾಗಿ ಮಾತ್ರ ಮನೆಗೆ ಬೇಟಿ ನೀಡುತ್ತಿದ್ದು ಇವರ ಮೊದಲನೇ ಪತ್ನಿ ಮತ್ತು ಮಕ್ಕಳು ಗೂನಡ್ಕ ಜಮಾಅತ್ ಕಾರ್ಯ ವ್ಯಾಪ್ತಿಯಲ್ಲಿ ವಾಸವಾಗಿದ್ದರೂ ಜಮಾಅತ್ ಸದಸ್ಯತ್ವ ಇವರ ಹೆಸರಲ್ಲಿ ಇರುವುದರಿಂದ ಅವರು ಮಾಡಿರುವ ಹೀನ ಕೃತ್ಯವನ್ನು ಜಮಾಅತ್ ಕಮಿಟಿಯು ಮತ್ತು ಕುಟುಂಬಸ್ತರು ಬಹಳ ಗಂಭೀರ ವಾಗಿ ಪರಿಗಣಿಸಿದೆ.
ಇವರು ಒಬ್ಬ ಮುಸ್ಲಿಯಾರ್ ಆಗಿದ್ದು ಇಂತಹ ನೀಚ ಕೃತ್ಯಗಳಲ್ಲಿ ತೊಡಗಿಸಿಕೊಂಡ ಇಂತಹವರಿಗೆ ಯಾವದೇ ಜಮಾಅತ್ ನಲ್ಲಿ ಸದಸ್ಯತ್ವ ನೀಡಬಾರದೆಂದು ನಮ್ಮ ನಿಲುವಾಗಿದೆ ಈ ರೀತಿಯ ತೀರ್ಮಾನಗಳು ಎಲ್ಲಾ ಜಮಾಅತ್ ಗಳಲ್ಲಿ ಕೈಗೊಂಡಲ್ಲಿ ಇಂತಹ ನೀಚರನ್ನು ಮಟ್ಟ ಹಾಕಲು ಸಾದ್ಯವಾಗಲಿದೆ ಎಂದು ಜಮಾಅತ್ ಆಡಳಿತ ಸಮಿತಿಯ ಅಭಿಪ್ರಾಯವಾಗಿದೆ
ಅಲ್ಲದೇ ಇವರು ಮಾಡಿರುವ ಕೃತ್ಯಗಳು ಮೃಗೀಯ ಸ್ವಭಾವ ದಾಗಿದ್ದು ಅರೋಪ ಸಾಬೀತಾದಲ್ಲಿ ಕಠಿನ ಶಿಕ್ಷೆಗೆ ಒಳಪಡಿಸಲು ಒತ್ತಾಯ ಕೂಡಾ ಮಾಡಲಾಗುತ್ತಿದೆ ಎಂದು ಕಮಿಟಿ ಆಡಳಿತ ಮಂಡಳಿಯ ತಿಳಿಸಿರುತ್ತಾರೆ.
- Saturday
- November 23rd, 2024