ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ 7 ದಿನಗಳ ಲಾಕ್ ಡೌನ್ ನಾಳೆಗೆ ಅಂತ್ಯಗೊಳ್ಳಲಿದೆ. ಗುರುವಾರದಿಂದ ಜನಜೀವನ ಯಥಾಸ್ಥಿತಿಗೆ ಮರಳುವ ನಿರೀಕ್ಷೆಯಿದ್ದು ಉದ್ಯಮ, ವ್ಯಾಪಾರ ವಹಿವಾಟು ಮತ್ತೆ ಎಂದಿನಿಂತೆ ಆರಂಭಗೊಳ್ಳುವ ನಿರೀಕ್ಷೆಯಿದೆ.
ನಾಳೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಲಾಕ್ ಡೌನ್ ಅಂತ್ಯಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಉಸ್ತುವಾರಿ ಸಚಿವರ ಹೇಳಿಕೆ ನೀಡಿದ್ದಾರೆ. ಇನ್ನೂ 14 ದಿನಗಳ ಕಾಲ ವಿಸ್ತರಿಸಬೇಕೆಂದು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವಿದೆ ಎಂದಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲೂ ಒಂದು ವಾರದ ಲಾಕ್ ಡೌನ್ ಮುಗಿಯಲಿದ್ದು ನಾಳೆಯಿಂದ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್ ಗಳ ಸಮೇತ ವ್ಯಾಪಾರ ವಹಿವಾಟು ಮುಕ್ತವಾಗಿ ನಡೆಯಲಿದೆ ಎಂಬ ಮಾಹಿತಿಯಿದೆ.