ಪೆರುವಾಜೆ ಬಿಜೆಪಿಯ ಪ್ರಭಾವಿ ಮುಖಂಡಯೊಬ್ಬ ಕಾಡಿನೊಳಗೆ ವಿವಾಹಿತ ಮಹಿಳೆಯನ್ನು ಕರೆದುಕೊಂಡು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಒದೆ ತಿಂದಿರುವ ಘಟನೆ ಜು . 19 ರ ರಾತ್ರಿ ನಡೆದಿದೆ ಎನ್ನಲಾಗಿದೆ.
ಪೆರುವಾಜೆ ಗ್ರಾಮದ ಕುಂಡಡ್ಕ ದಲ್ಲಿ ಜು.19 ರಂದು ವಿವಾಹಿತ ಮಹಿಳೆಯೊಬ್ಬರನ್ನು ಕಾಡಿನ ಪೊದೆಯೊಳಗೆ ಕರೆದುಕೊಂಡು ಹೋಗಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ವಿವಾಹಿತ ಮಹಿಳೆಯ ಗಂಡನ ತಮ್ಮ ಹೋಗಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಧರ್ಮದೇಟು ತಿಂದ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸಿಕ್ಕಿ ಬಿದ್ದಿರುವ ಪ್ರಭಾವಿ ವ್ಯಕ್ತಿ ಮತ್ತು ಮಹಿಳೆಯ ಅಕ್ರಮ ಸಂಬಂಧ ಹಲವು ದಿನಗಳಿಂದ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಆತನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ತನ್ನ ಚಾಳಿ ಮುಂದುವರೆಸಿದ್ದರಿಂದ ಧರ್ಮದೇಟು ಬಿದ್ದಿದೆ. ಘಟನೆ ಬಳಿಕ ಆ ಪ್ರಭಾವಿ ವ್ಯಕ್ತಿಯ ಕಡೆಯವರು ಬೆದರಿಕೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.