
ರಾಜ್ಯದಲ್ಲಿ ಇಂದು ಫುಲ್ ಲಾಕ್ ಡೌನ್ ಇದ್ದರೂ ಶ್ರಮ ಸೇವೆಯ ಮೂಲಕ ಬಡ ಕುಟುಂಬವೊಂದಕ್ಕೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡ ಸುಳ್ಯ ವಲಯ ಮೇನಾಲ ವಿಖಾಯ ಕಾರ್ಯಕರ್ತರು ಮಾದರಿ ಸೇವೆ ನೀಡಿದರು.
ಮೇನಾಲ ನಿವಾಸಿ ಹನೀಫ್ ಎಂಬವರಿಗೆ ನಿರ್ಮಿಸುತ್ತಿರುವ ಮನೆಯ ಫೌಂಡೇಶನ್ ಗೆ ಮಣ್ಣು ತುಂಬಿಸುವ ಕೆಲಸವನ್ನು ಮಾಡಿ ವಿಖಾಯ ತಂಡವು ಲಾಕ್ ಡೌನ್ ಅನ್ನು ಸದುಪಯೋಗಿಸಿಕೊಂಡರು.
ಶ್ರಮ ಸೇವೆಯಲ್ಲಿ ಮೇನಾಲ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಖಾದರ್ ಬೆಲ್ಯ,ಕಾರ್ಯದರ್ಶಿ ಮಹಮ್ಮದ್ ಮೇನಾಳ,ಕೋಶಾಧಿಕಾರಿ ಷರೀಫ್ ರಿಲ್ಯಾಕ್ಸ್, ವಿಖಾಯ ಸ್ವಯಂ ಸೇವಕರಾದ ಆರಾಫತ್, ಅಬ್ದುಲ್ಲಾ, ಹಕೀಮ್, ಜುನೈದ್, ರಶೀದ್, ಸಿದ್ದೀಕ್ ಸೇರಿದಂತೆ ಸುಮಾರು ಇಪ್ಪತ್ತು ಜನರು ಭಾಗವಹಿಸಿದ್ದರು.