ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಎಂದು ಪರಿಗಣಿಸಿದ ಜಿಲ್ಲಾಡಳಿತ ಸುಳ್ಯ ಪೊಲೀಸ್ ಠಾಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾಧ್ಯಮ ಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕೆವಿಜಿ ಸಂಸ್ಥೆಯ ವಕ್ತಾರರು ಮಾಧ್ಯಮ ಗಳಿಗೆ ಸ್ಪಷ್ಟನೆ ನೀಡಿ ನಮ್ಮ ಸಂಸ್ಥೆಯ ವೈದ್ಯರು ಅಲ್ಲ ,ಸಿಬ್ಬಂದಿಯೂ ಅಲ್ಲ ಎಂದಿದೆ.
ನಮ್ಮಲ್ಲಿರುವ ಯಾರೂ ಕ್ವಾರೆಂಟೈನ್ ನಿಯಮ ಉಲ್ಲಂಘಿಸಿಲ್ಲ . ಕೆವಿಜಿಯ ಐವರು ವೈದ್ಯರ ಮೇಲೆ ಕೇಸು ದಾಖಲಾಗಿದೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು . ನಾವು ಪೊಲೀಸ್ ಠಾಣೆ ಸಂಪರ್ಕಿಸಿ ಆ ಕೇಸಿಗೊಳಗಾದ ವ್ಯಕ್ತಿಗಳಿಗೆ ಫೋನ್ ಮಾಡಿ ವಿಚಾರಿಸಿದೆವು . ಅವರಲ್ಲಿ ಮೂವರು ನಮ್ಮ ಮೆಡಿಕಲ್ ಕಾಲೇಜಿಗೆ ಯಂತ್ರ ದುರಸ್ತಿಗಾಗಿ ಚೆನ್ನೈಯಿಂದ ಬಂದು ಹೋಗಿದ್ದರಂತೆ . ಇನ್ನಿಬ್ಬರು ಫೋನ್ ಸಂಪರ್ಕಕ್ಕೆ ಲಭ್ಯರಾಗಿಲ್ಲ . ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಾಗ ಈ ಮೂವರು ಕಾಲೇಜಿಗೆ ಬಂದಿರಲಿಲ್ಲವಂತೆ . ಆದ್ದರಿಂದ ತಪ್ಪು ಮಾಹಿತಿಯಿಂದ ನಮ್ಮ ಕಾಲೇಜಿನ ಹೆಸರು ಉಲ್ಲೇಖಿಸಲ್ಪಟ್ಟಿರಬಹುದು . ನಮ್ಮಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ .
ವೈದ್ಯರುಗಳಾದ ವಾನನ್ಸ್, ದೇವರಾಮನ್, ಪ್ರೇಮ್ ಕುಮಾರ್ ಜಿ., ಪ್ರಬೀನ್ ಜಾರ್ಜ್ ಹಾಗೂ ಶೃತಿ ಸಿ. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜು.15 ರಂದು ಕ್ವಾರಂಟೈನ್ ಉಲ್ಲಂಘಿಸಿದ್ದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಪಿಎಸ್ ಆಧಾರಿತ ಮಾಹಿತಿ ಪಡೆಯಲಾಗಿತ್ತು.
ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ವೈದ್ಯರುಗಳನ್ನು 14 ದಿನಗಳ ಕಾಲ ಕ್ವಾರಂಟೈನ್ ಒಳಪಡಿಸಲಾಗಿತ್ತು. ಆದರೆ ಐವರು ವೈದ್ಯರು ನಿಯಮ ಉಲ್ಲಂಘಿಸಿ ಊರಿಡೀ ಸುತ್ತಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಕೇಸು ದಾಖಲಾದದ್ದು ಮತ್ತು ಸಂಸ್ಥೆಯ ವಕ್ತಾರರ ಹೇಳಿಕೆ ಜನರಿಗೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು ಪೋಲೀಸರೇ ಸಮಗ್ರ ತನಿಖೆ ನಡೆಸಿ ಸರಿಯಾದ ಮಾಹಿತಿ ಒದಗಿಸಬೇಕಾಗಿದೆ. ಇಲ್ಲದೇ ಹೋದರೇ ಪೋಲೀಸರು ಮತ್ತು ಆಸ್ಪತ್ರೆಗಳು ಜನರನ್ನು ಭಯದಲ್ಲಿ ಸಾಯುವಂತೆ ಮಾಡುವುದರಲ್ಲಿ ಸಂಶಯವಿಲ್ಲ.