ಸುಳ್ಯ ಚರ್ಚ್ ನ ಹಿರಿಯ ಧರ್ಮ ಗುರುಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ .
ಕೆಮ್ಮು ಮತ್ತು ಜ್ವರ ಇದ್ದ ಹಿನ್ನಲೆಯಲ್ಲಿ ಅವರು ಕೋವಿಡ್ ಟೆಸ್ಟ್ ಗೆ ಸ್ವಯಂ ಹೋಗಿದ್ದರು . ಅವರ ಜತೆ ಕಿರಿಯ ಧರ್ಮ ಗುರುಗಳು ಕೂಡಾ ಹೋಗಿದ್ದರಿಂದ ಅವರು ಅದೇ ಆಸ್ಪತ್ರೆಯಲ್ಲಿ ಕ್ವಾರೆಂಟೇನ್ ಆಗಿದ್ದಾರೆ . ಚರ್ಚ್ ನಲ್ಲಿ ಅಡುಗೆ ಮಾಡುತ್ತಿದ್ದ ಹಾಗೂ ಸಹಾಯಕರಾಗಿದ್ದ ಇಬ್ಬರು ಮಹಿಳೆಯರಿಗೆ ಕ್ವಾರೆಂಟೇನ್ ನಲ್ಲಿರಲು ಸೂಚಿಸಲಾಗಿದೆ .
- Friday
- November 8th, 2024