Ad Widget

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ಮೊಗರ್ಪಣೆ ಸೇತುವೆಯ ದುರಸ್ತಿ

*ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಮಿತಿಯ ಸದಸ್ಯರು ಮೊಗರ್ಪಣೆ ಸೇತುವೆಯ ದುರಸ್ತಿ ಗೊಂಡಿರುವ ಭಾಗವನ್ನು ಕಾಂಕ್ರೀಟ್ ತುಂಬಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು*.

. . . . . . . . .


ಕಳೆದ ಬಾರಿ ಕೆಆರ್ ಡಿಸಿಎಲ್ ವತಿಯಿಂದ ರಸ್ತೆ ಡಾಮರೀಕರಣ ಸಂದರ್ಭದಲ್ಲಿ ಸೇತುವೆಯ ಮೇಲ್ಭಾಗಕ್ಕೆ ಸಂಪೂರ್ಣ ಡಾಮರೀಕರಣ ಗೊಳಿಸಲಾಗಿತ್ತು. ಆದರೆ ದಿನಗಳು ಕಳೆದಂತೆ ಸೇತುವೆಯ ಸಸ್ಪೆನ್ಸನ್ ಜಾಯಿಂಟ್ ಬಳಿ ಡಾಮರು ಬಿಟ್ಟು ಹೋಗಿದ್ದು ಇದರಿಂದ ವಾಹನ ಚಾಲಕರಿಗೆ ಸಂಕಷ್ಟ ಉಂಟಾಗುತ್ತಿತ್ತು.
ಇದಕ್ಕೆ ಸ್ಪಂದಿಸಿದ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರು ಇದರ ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ತಮ್ಮ ಸಮಿತಿ ಅಧ್ಯಕ್ಷ ಪದಾಧಿಕಾರಿಗಳೊಂದಿಗೆ  ಚರ್ಚಿಸಿ   ಭಾನುವಾರದ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ  ಸೇವೆಯ ಒಂದು ಭಾಗವಾಗಿ ಈ ಕಾರ್ಯಕ್ರಮವನ್ನು ತೊಡಗಿಸಿಕೊಂಡು ಶ್ರಮಧಾನ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಬುಸಾಲಿ ಪೈಚಾರ್, ಕಾರ್ಯದರ್ಶಿ ಮುಜೀಬ್ ಪೈಚಾರ್, ಕೋಶಾಧಿಕಾರಿ ಸಮೀರ್ , ಸದಸ್ಯರುಗಳಾದ ಫಲುಲುಧ್ಧೀನ್,  ಪಿ ಕೆ, ನಾಸೀರ್ ಕೆಪಿ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಆರ್ ಬಿ ಬಶೀರ್, ಹಸೈನ್ ಪೈಚಾರ್, ಅಲ್ ಮದಿನಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶ್ರಫ್ ಪೈಚಾರ್, ಹರ್ಷದ್ ಪೈಚ್ಚಾರ್, ಸಮಿತಿಯ ಮಾಜಿ ಗೌರವಧ್ಯಕ್ಷ ಷರೀಫ್ ಟಿ ಎ ಉಪಸ್ಥಿತರಿದ್ದರು. ಸಮಿತಿಯ ಮಾಜಿ ಅಧ್ಯಕ್ಷ ರಿಫಾಯಿ  ಎಸ್ ಎ  ಸಂಪೂರ್ಣ ಸಾಮಗ್ರಿಗಳನ್ನು ನೀಡಿ ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading