ಆಡು ಕದ್ದು ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಟಯರು ಹೂತು ಹೋಗಿ ಆಡು ಕಳ್ಳ ಸಿಕ್ಕಿಬಿದ್ದ ಘಟನೆ ಕಲ್ಲುಗುಂಡಿಯಲ್ಲಿ ಜು.17 ರಂದು ನಡೆದಿದೆ. ನೆಲ್ಲಿಕುಮೇರಿಯ ವಿನ್ಸೆಂಟ್ ಎಂಬುವರ ಆಡು ನಿನ್ನೆ ಸಾಂಯಕಾಲ ಕಾಣೆಯಾಗಿದ್ದು ಹುಡುಕಾಡಿದಾಗ ಕೆಎಫ್ ಡಿಸಿಯ ರಬ್ಬರ್ ತೋಟದಲ್ಲಿ ಟಯರ್ ಹೂತು ಹೊಗಿ ಬಾಕಿಯಾಗಿದ್ದ ರಿಕ್ಷಾದಲ್ಲಿ ಆಡು ಕಟ್ಟಿಹಾಕಿದ್ದು ಊರಿನವರಿಗೆ ತಿಳಿಯಿತು. ಜನ ಸೇರಿದಾಗ ರಿಕ್ಷಾ ಬಿಟ್ಟು ಓಡಿ ಹೋಗಲೆತ್ನಿಸಿದಾಗ ಚಾಲಕ ಚೆಂಬು ಗ್ರಾಮದ ಪಿಂಟು ಯಾನೆ ಪ್ರದೀಪ ಎಂಬವನನ್ನು ಪೋಲೀಸರಿಗೊಪ್ಪಿಸಿದ್ದಾರೆ. ಈತ ಇದುವರೆಗೆ ಕಳ್ಳತನದಲ್ಲಿ ಭಾಗಿಯಾದವನಲ್ಲ. ಇತನ ಜತೆಗಿದ್ದವರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಲ್ಲುಗುಂಡಿ ಪೋಲೀಸರು ತಿಳಿಸಿದ್ದಾರೆ.
- Tuesday
- December 3rd, 2024