Ad Widget

ದನಸಾಗಾಟ ಅಕ್ರಮವಲ್ಲ. ಹಾಲು ಉತ್ಪಾದನೆಗಾಗಿ ಹಸುಗಳನ್ನು ಖರೀದಿಸಲಾಗಿದೆ. ದಾಖಲೆಗಳು ಇದ್ದರು ನಮ್ಮನ್ನು ಅಪರಾಧಿಗಳನ್ನಾಗಿಸಿರುವುದು ಸರಿಯಲ್ಲ – ಮಹಿಳೆ ಹೇಳಿಕೆ


ಜುಲೈ 14 ರಂದು ಪುತ್ತೂರು ಕಾವು ನಿಂದ ಸುಳ್ಯಕ್ಕೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಬಜರಂಗದಳದ ಯುವಕರು ಕನಕಮಜಲಿನಲ್ಲಿ ಕಾದು ಕುಳಿತು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿ ನಂತರ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಪಿಕಪ್ ವಾಹನವನ್ನು ಹಾಗೂ ದನಸಾಗಾಟ ದಲ್ಲಿ ಭಾಗಿಯಾದ ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಎರಡು ದಿನಗಳ ಬಳಿಕ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಖ್ ರವರಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಅವರನ್ನು ಬಂಧಿಸಿದ ಸುಳ್ಯ ಎಸ್ ಐ ಹರೀಶ್ ಎಂ ಆರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹೋಂ ಕೋರಂ ಟೈನ್ ಹೋಗಿರುವುದು, ಸ್ಟೇಷನ್ ಸೀಲ್ ಡೌನ್ ಆಗಿರುವುದು ಆಯ್ತು.

. . . . . . .

ಇದರ ಬೆನ್ನಲ್ಲೆ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಲಭಿಸಿದಂತಾಗಿದ್ದು ದನ ಖರೀದಿಸಿದ ಮಹಿಳೆ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಅಕ್ರಮ ದನಸಾಗಾಟ ವೆಂದು ಬಜರಂಗದಳದವರು ಪೋಲೀಸಿನವರು ಬೆನ್ನಟ್ಟಿ ಹಿಡಿದ ಪ್ರಕರಣ ಅಕ್ರಮವಲ್ಲ . ಹಾಲು ಉತ್ಪಾದನೆಗೆಂದು ಸುಮಾರು 85 ಸಾವಿರ ರೂಪಾಯಿಗಳಿಂದ ಖರೀದಿಸಿದ ಎರಡು ಹಸುಗಳನ್ನು ದಾಖಲೆಯೊಂದಿಗೆ ತಂದಿರುವುದು ಎಂದು ಹಸುಗಳನ್ನು ಖರೀದಿಸಿದ ಮಾಲಕಿ ತಮ್ಮ ದಾಖಲೆಗಳೊಂದಿಗೆ ಪತ್ರಿಕೆಗೆ ಸ್ಪಷ್ಟನೆಯನ್ನು ನೀಡಿರುತ್ತಾರೆ.

ಸುಳ್ಯದ ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ನನ್ನ ಮನೆಯಿದ್ದು ಆಲೆಟ್ಟಿ ಭಾಗದ ಕಮ್ಮಾಡಿ ಪರಿಸರದಲ್ಲಿ ಸುಮಾರು 60 ಎಕರೆ ಕೃಷಿಭೂಮಿ ಇದೆ ಎಂದು ಮಹಿಳೆ ಡಯಾನ ತಿಳಿಸಿದ್ದಾರೆ. ತಮ್ಮ ಜಮೀನಿನಲ್ಲಿ ರಬ್ಬರ್ ಅಡಿಕೆ ತೆಂಗು ಮುಂತಾದ ಕೃಷಿಗಳನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಇದರೊಂದಿಗೆ ಸುಳ್ಯ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಡಯಾನ ವಿಲಾ ಎಂಬ ಹೆಸರಿನಲ್ಲಿ ಸುಮಾರು 8 ಬಾಡಿಗೆ ಕೊಠಡಿಗಳಿದ್ದು ಒಂದರಲ್ಲಿ ತಾವು ವಾಸಿ ಸಿಕೊಂಡು ಉಳಿದ 7 ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ರ ಲಾಕ್ಡೌನ್ ಹಿನ್ನೆಲೆಯಲ್ಲಿ ತಾವು ನೀಡಿದ ಬಾಡಿಗೆ ಕೊಠಡಿಗಳಿಂದ ಬಾಡಿಗೆ ಹಣ ಬಾರದೆ ಇರುವುದರಿಂದ ತಮ್ಮ ತೋಟದಲ್ಲಿ ಹಸುಗಳನ್ನು ಸಾಕುವ ಬಗ್ಗೆ ಆಲೋಚಿಸಿದ್ದೇನೆ. ಅದಕ್ಕಾಗಿ ಎರಡು ಹಸುಗಳನ್ನು ಖರೀದಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾವು ದಯಾನಂದ ಶೆಟ್ಟಿ ಎಂಬವರ ಮಾಲಕತ್ವದ ಡೈರಿ ಫಾರ್ಮಿನಿಂದ ಸುಮಾರು 85 ಸಾವಿರ ರೂಪಾಯಿಗಳನ್ನು ನೀಡಿ ಒಂದು ಹಾಲು ನೀಡುವ ಹಸು, ಅದೇ ರೀತಿ 8 ತಿಂಗಳ ಗರ್ಭಧರಿಸಿದ ಮತ್ತೊಂದು ಹಸುವನ್ನು ಜುಲೈ 14ರಂದು ತೋಟದ ಕಾರ್ಮಿಕ ಕಮ್ ವಾಹನ ಚಾಲಕ ಉಮರ್ ಫಾರೂಕ್ ರವರನ್ನು ಕಳುಹಿಸಿ ಜಾನುವಾರು ಸಾಗಾಟದ ಎಲ್ಲಾ ಪರವಾನಿಗೆ ಪತ್ರಗಳನ್ನು ಕಾನೂನಿನ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಜು. 11 ರಂದೇ ತಯಾರಿಸಿ ಹಸುಗಳನ್ನು ತಮ್ಮ ಪಿಕಪ್ ವಾಹನದಲ್ಲಿ ಸುಳ್ಯಕ್ಕೆ ಕರೆ ತರಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಕಾವು ಮುಖ್ಯರಸ್ತೆಯಲ್ಲಿ ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ತಮ್ಮ ಪಿಕಪ್ ವಾಹನ ಮತ್ತು ಹಸುವನ್ನು , ಫಾರೂಕ್ ಅವರ ಬಳಿ ಇದ್ದ ಹಸುಗಳ ಸಾಗಾಣಿಕೆಗೆ ಬೇಕಾದ ಪರವಾನಿಗೆ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿಕೊಟ್ಟಿದ್ದರು. ಸ್ವಲ್ಪದೂರ ಬರುತ್ತಿದ್ದಂತೆ ಐದಾರು ಯುವಕರ ತಂಡ ದ್ವಿಚಕ್ರವಾಹನದಲ್ಲಿ ತಮ್ಮ ವಾಹನವನ್ನು ಬೆನ್ನಟ್ಟಿ ಸಿ ಅವಾಚ್ಯ ಶಬ್ದಗಳಿಂದ ಬೈದು ಆಕ್ರಮಣಕ್ಕೆ ಬರುತ್ತಿರುವುದನ್ನು ಗಮನಿಸಿದ ಫಾರೂಕ್ ರವರು ತಮ್ಮ ಜೀವ ರಕ್ಷಣೆ ಗಾಗಿ ವಾಹನವನ್ನು ಅತ್ಯಂತ ವೇಗದಲ್ಲಿ ಚಲಾಯಿಸಿಕೊಂಡು ಸುಳ್ಯ ಠಾಣೆಗೆ ತಮ್ಮ ರಕ್ಷಣೆಯ ಉದ್ದೇಶದಿಂದ ಬಂದಿರುತ್ತಾರೆ. ಬರುವ ವೇಗದಲ್ಲಿ ಜ್ಯೋತಿ ವೃತ್ತದ ಬಳಿ ಪೊಲೀಸ್ ವಾಹನ ನಿಂತಿರುವುದು ಅವರಿಗೆ ಕಾಣಿಸಲಿಲ್ಲ ಎಂದು ಅವರು ಹೇಳಿರುತ್ತಾರೆ. ಭಯಭೀತನಾಗಿ ನಾನು ವಾಹನವನ್ನು ಚಲಾಯಿಸಿಕೊಂಡು ಸುಳ್ಯದ ಪೊಲೀಸ್ ಠಾಣೆಗೆ ಹೋಗುತ್ತಿದ್ದ, ಆದರೆ ಒಮ್ಮೆಲೆ ಯುವಕರ ತಂಡ ಮತ್ತು ಪೊಲೀಸರು ಏಕಾಏಕಿ ನನ್ನ ಮೇಲೆ ಮುಗಿಬೀಳಲು ಪ್ರಾರಂಭಿಸಿದಾಗ ವಾಹನವನ್ನು ಎರಬಿರಿ ಚಲಾಯಿಸುವಂತ ಪರಿಸ್ಥಿತಿ ಆತನಿಗೆ ಬಂದಿತ್ತು. ನಂತರ ಅವನು ವಾಹನವನ್ನು ತನ್ನ ಮನೆಯ ಹತ್ತಿರ ನಿಲ್ಲಿಸಿ ಅಲ್ಲಿಂದ ರೂಮಿನತ್ತ ಓಡಿರುತ್ತಾನೆ ಎಂದು ಅವರು ಹೇಳಿದ್ದಾರೆ.
ಆದರೆ ಈ ಸಂದರ್ಭದಲ್ಲಿ ಯಾರೂ ಕೂಡ ನಮ್ಮ ಬಗ್ಗೆ ಮತ್ತು ನಮ್ಮ ಬಳಿಯಲ್ಲಿರುವ ದಾಖಲೆಗಳ ಬಗ್ಗೆ ಪರಿಶೀಲಿಸಿ ನಮ್ಮ ನಿರಪರಾಧಿತ್ವವನ್ನು ತಿಳಿದುಕೊಳ್ಳಲು ಯಾರು ಕೂಡ ಪ್ರಯತ್ನಿಸಲಿಲ್ಲ. ಕೂಡಲೇ ನಮ್ಮನ್ನು ಅಪರಾಧಿಗಳನ್ನಾಗಿ ಮಾಡಿ ನಮ್ಮ ಮನೆಯ ಮೇಲೆ ಆಕ್ರಮಣವನ್ನು ಮಾಡಿರುತ್ತಾರೆ. ಇದೀಗ ಎಲ್ಲ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ಮಲಯಾಳಂ ವೆಬ್ಸೈಟ್ ಗ್ರೂಪ್ ಗಳಲ್ಲಿ ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಲೇಖನಗಳನ್ನು ಬರೆಯುತ್ತಿದ್ದು ಮಾನಸಿಕವಾಗಿ ಚಿತ್ರಹಿಂಸೆಯನ್ನು ನೀಡುತ್ತಿರುವುದು ಸರಿಯಾದ ರೀತಿಯಲ್ಲ ಎಂದು ತಮ್ಮ ನೋವನ್ನು ಪತ್ರಿಕೆಗೆ ಸ್ಪಷ್ಟೀಕರಣ ವಾಗಿ ನೀಡಿರುತ್ತಾರೆ. ಇದರೊಂದಿಗೆ ತಮ್ಮ ಬಳಿಯಲ್ಲಿದ್ದ ಹಸುಗಳ ಸಾಗಾಟದ ಪರವಾನಿಗೆ ಪತ್ರ ಮತ್ತು ದಾಖಲೆಗಳ ಪತ್ರ ಪ್ರಾಣಿಗಳ ಸಾಗಾಟದ ಕಚೇರಿಯಿಂದ ನೀಡಿರುವ ದೃಢೀಕರಣ ಪತ್ರದ ಪ್ರತಿಗಳನ್ನು ಪತ್ರಿಕೆಗೆ ನೀಡಿರುತ್ತಾರೆ. ವಿನಾಕಾರಣ ಯಾವುದೇ ಸರಿಯಾದ ಮಾಹಿತಿಗಳು ಇಲ್ಲದೆ ಯಾರನ್ನೂ ಕೂಡ ಸಮಾಜದಲ್ಲಿ ಅಪರಾಧಿಗಳನ್ನಾಗಿ ಮಾಡಿ ಅವರ ಮಾನ ಹರಾಜನ್ನು ಮಾಡಬಾರದೆಂದು ಪತ್ರಿಕೆಯ ಮೂಲಕ ವಿನಂತಿಸಿ ಕೊಂಡಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!