ಜು.14 ರಂದು ಸುಳ್ಯದಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಜುಲೈ 18ರಿಂದಸೀಲ್ ಡೌನ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎಸ್.ಐ. ಹರೀಶ್ ಸೇರಿದಂತೆ ಆರೋಪಿಯ ಬಂಧನದಲ್ಲಿ ತೊಡಗಿಸಿಕೊಂಡ ಮೂವರು ಪೋಲೀಸ್ ಸಿಬ್ಬಂದಿಗಳು ಹೋಂ ಕ್ವಾರೆಂಟೇನ್ ಗೆ ತೆರಳಲಿದ್ದಾರೆ.
ಆರೋಪಿ ಅಬ್ದುಲ್ ಫಾರುಕ್ ನನ್ನು ನ್ಯಾಯಾಲಯ ಕ್ಕೆ ಹಾಜರು ಪಡಿಸಿದಾಗ ಕೊರೊನಾ ಟೆಸ್ಟ್ ಗೆ ಸೂಚಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಅದು ಪಾಸಿಟಿವ್ ಆಗಿದೆ. ಈ ಆರೋಪಿಗೆ ಇದೀಗ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜತೆಗೆ ಆರೋಪಿಯನ್ನು ಹಿಡಿಯಲು ಸಹಕಾರ ನೀಡಿದ ಸಂಘಟನೆಗಳ ಸದಸ್ಯರು ಕೂಡ ಕಾರಂಟೈನ್ ಗೊಳಗಾಗುವ ಸಾಧ್ಯತೆ ಹೆಚ್ಚಿದೆ.