Ad Widget

ಕುಸುಮ ಸಾರಂಗದ ವತಿಯಿಂದ ವಾಟ್ಸಾಪ್ ಮುಖಾಂತರ ವಿವಿಧ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ‌ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸುವ ಎಲ್ಲರಿಗೂ ಇ-ಪ್ರಮಾಣ ಪತ್ರ ನೀಡಿ ಗೌರವಿಸಲಿದೆ.

. . . . .

ಸ್ಪರ್ಧೆಗಳ ವಿವರ ಮತ್ತು ನಿಯಮಗಳು.

1.ಡ್ರಾಯಿಂಗ್
*ವಿಷಯ: ಗ್ರಾಮೀಣ ಬದುಕು
*ಚಿತ್ರಗಳು ಸ್ವರಚಿತವಾಗಿರಲಿ
*ಚಿತ್ರಗಳು ಲ್ಯಾಂಡ್ ಸ್ಕೋಪ್ ನಲ್ಲಿರಲಿ.
*ಚಿತ್ರ ಬರೆದು ಸ್ಕ್ಯಾನ್ ಮಾಡಿ 28.07.2020 ರ ಒಳಗಾಗಿ ಕಳುಹಿಸತಕ್ಕದ್ದು.
* ವಾಟ್ಸ್ಆಪ್ ಸಂಖ್ಯೆ: 8762709257
*ಬಹುಮಾನ: ಪ್ರ: ರೂ.2000 ದ್ವಿ: ರೂ.1000

  1. ಕವನ ವಾಚನ
    *ಭಾಷೆ:ಕನ್ನಡ
    *ಸ್ಪಷ್ಟ ವಾಚನ, ಕವನದ ಆಯ್ಕೆ, ಭಾವಾಭಿವ್ಯಕ್ತಿ ಹಾಗೂ ಕವನದ ಭಾವರ್ಥವನ್ನು ಅರ್ಥೈಸುವ ರೀತಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
    *ಕವನ ವಾಚನದ ವಿಡಿಯೋ ಮಾಡಿ ಕಳುಹಿಸಬೇಕು. ಮೊಬೈಲ್ ಕ್ಯಾಮರವನ್ನು ಬಳಸಬಹುದು.
    *ಕವನದ ಕರ್ತೃವಿನ ಹೆಸರು, ಶೀರ್ಷಿಕೆಯನ್ನು ವಿಡಿಯೋದ ಆರಂಭದಲ್ಲೇ ಸ್ಪಷ್ಟವಾಗಿ ತಿಳಿಸಿ.
    *ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 28 ಜುಲೈ 2020
    • ವಾಟ್ಸ್ಆಪ್ ಸಂಖ್ಯೆ: 8762709257
    • ಬಹುಮಾನ; ಪ್ರ: ರೂ.2000 ದ್ವಿ:ರೂ.1000
  2. ಏಕಪಾತ್ರಾಭಿನಯ
    *ಒಬ್ಬನೇ ವ್ಯಕ್ತಿ ಎರಡು ಪಾತ್ರಗಳನ್ನು ನಿರ್ವಹಿಸಬೇಕು.
    *ಆಯ್ಕೆ ಮಾಡಿದ ಪಾತ್ರದ ಮೂಲ(ಕೃತಿ,ಕರ್ತೃವಿನ ಹೆಸರು)ಆರಂಭದಲ್ಲೇ ವಿಡಿಯೋಯೋದಲ್ಲಿ ತಿಳಿಸಿ.
    *ಕಾಸ್ಟ್ಯೂಮ್, ಹಿನ್ನೆಲೆ ಸಂಗೀತದ ಅವಶ್ಯಕತೆಯಿಲ್ಲ.
    *ಸಮಯ:ಗರಿಷ್ಟ 3 ನಿಮಿಷ
    *ಮೊಬೈಲ್ ಕ್ಯಾಮರ ಬಳಸಬಹುದು. ಎಡಿಟೆಡ್ ವಿಡಿಯೋಗಳಿಗೆ ಅವಕಾಶವಿಲ್ಲ.
    *ವಿಡಿಯೋ ಕಳುಹಿಸಲು ಕೊನೆಯ ದಿನಾಂಕ :28.07.2020
    *ವಾಟ್ಸ್ಆಪ್ ನಂಬರ್: 8762709257
    *ಬಹುಮಾನ: ಪ್ರ: ರೂ.3000 ದ್ವಿ:ರೂ.2000

ವಿಶೇಷ ಸೂಚನೆ:

  1. 28.07.2020 ರ ನಂತರ ಕಳುಹಿಸಿದ ವಿಡಿಯೋಗಳನ್ನು ಸ್ವೀಕರಿಸುವುದಿಲ್ಲ.
    2.ಭಾಗವಹಿಸುವವರ ವಯಸ್ಸಿಗೆ ಮಿತಿಯಿಲ್ಲ 3.ಅಶ್ಲೀಲ, ವಿವಾದಾತ್ಮಕ ವಿಚಾರಗಳಿಗೆ ಅವಕಾಶವಿಲ್ಲ.
  2. 4.ಪ್ರಥಮ ಸುತ್ತಿನಲ್ಲಿ ಆಯ್ಕೆಯಾದ ಕವನ ವಾಚನ ಮತ್ತು ಏಕಪಾತ್ರಾಭಿನಯದ ಹತ್ತು ವಿಡಿಯೋಗಳನ್ನು ಅಂತಿಮ ಸುತ್ತಿನ ನಿರ್ಣಯಕ್ಕಾಗಿ ಕುಸುಮಾ ಸಾರಂಗ ಫೇಸ್‌ಬುಕ್‌ ಪೇಜ್ ಗೆ ಅಪ್ಲೋಡ್ ಮಾಡಲಾಗುವುದು. ವಿಡಿಯೋಗಳಿಗೆ ಬರುವ ಲೈಕ್ಸ್ ಗಳನ್ನು ಅಂಕಗಳಾಗಿ ಪರಿವರ್ತಿಸಿ ನಿರ್ಣಾಯಕರು ನೀಡುವ ಅಂಕಗಳಿಗೆ ಸೇರಿಸಲಾಗುವುದು.
  3. 5.ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ವಿದ್ಯಾರ್ಥಿಗಳು, ಕುಸುಮ ಸಾರಂಗದ ಪೂರ್ವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  4. ವಾಟ್ಸ್ ಆಪ್ ನಲ್ಲಿ ನಿಮ್ಮ ವಿಳಾಸ ಕಳುಹಿಸಲು ಮರೆಯದಿರಿ
    7.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7975675448, 9353481548

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!