
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು , ಜುಲೈ 16ರಂದು ಸಂಜೆ ಆರು ಗಂಟೆಯ ವೇಳೆ ಗಾಂಧಿನಗರದಲ್ಲಿ ಒಂದು ಅಂಗಡಿಯಲ್ಲಿ ವ್ಯಾಪಾರ ನಡೆಯುತ್ತಿದ್ದು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಸಾರಮಾಡಿತ್ತು. ಇದಕ್ಕೆ ಕೂಡಲೇ ಕಾರ್ಯಪ್ರವೃತ್ತರಾದ ಸಂಬಂಧಪಟ್ಟ ಅಧಿಕಾರಿಗಳು ಅಂಗಡಿ ಮಾಲಕರನ್ನು ಕರೆಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅಂಗಡಿ ಮಾಲಕ ನನ್ನ ಮನೆಯ ಅಲಮಾರಿಯ ಬೀಗದ ಕೀ ನನ್ನ ಅಂಗಡಿಯಲ್ಲಿ ಬೆಳಗಿನ ಸಂದರ್ಭ ಮರೆತು ಹೋಗಿದ್ದ ಕಾರಣ ಅದನ್ನು ಕೊಂಡೊಯ್ಯುವ ಉದ್ದೇಶದಿಂದ ಅಂಗಡಿಯ ಶಟರನ್ನು ಅರ್ಧಭಾಗ ಮೇಲಕ್ಕೆತ್ತಿರತ್ತೇನೆ.ಈ ವೇಳೆ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ನನ್ನ ಬಳಿ ಸಿಗರೇಟು ಇದೆಯಾ ಎಂದು ಕೇಳಿದರು. ಇದಕ್ಕೆ ಇಲ್ಲ ಎಂದು ಉತ್ತರಿಸಿ ಕೂಡಲೇ ಅಂಗಡಿಯ ಶಟರ್ ಬಂದು ಮಾಡಿರುತ್ತೇನೆ. ಅದಲ್ಲದೆ ಬೇರೆ ಯಾವುದೇ ವ್ಯಾಪಾರ ಉದ್ದೇಶಕ್ಕಾಗಿ ಅಂಗಡಿಯ ಬಾಗಿಲನ್ನು ಓಪನ್ ಮಾಡಲಿಲ್ಲ ಎಂದು ಕಟ್ರೇಲಾ ಟ್ರೇಡರ್ಸ್ ನ ಮಾಲಕರು ಪತ್ರಿಕೆಗೆ ಸ್ಪಷ್ಟನೆಯನ್ನು ನೀಡಿರುತ್ತಾರೆ.
ಇಂತಹ ಸಂದರ್ಭಗಳಲ್ಲಾದರೂ ಪೋಲೀಸರು ನಗರದ ವಿವಿಧೆಡೆ ಅಳವಡಿಸಿದ ಸಿಸಿ ಕ್ಯಾಮರಗಳು ಸರಿಯಾಗಿ ಕಾರ್ಯನಿರ್ಹಹಿಸುತ್ತಿದೆಯಾ ಎಂದು ಪರಿಶೀಲಿಸುವ ಅನಿವಾರ್ಯತೆ ಇದೆ.