✒️ ಅನ್ಸಾರ್ ಬೆಳ್ಳಾರೆ
ವಾಚ್ ಬಾಬಚ್ಚ ಅಂದ್ರೆ ಸುಳ್ಯ ನಾಡಿನಾದ್ಯಂತ ಪರಿಚಿತರು.. ಅಪರಿಚಿತರು ಬಂದ್ರೆ ಪರಿಚಿತರಂತೆ ಮಾತನಾಡುವ ಮುಗ್ದತೆಯ ಮನಸ್ಸಿನವರು…ಇಂದು ಬಾಬಚ್ಚನ ಮಗಳು ಕೇವಲ ಸುಳ್ಯ ಮಾತ್ರವಲ್ಲದೇ ತಾಲೂಕಿನಾದ್ಯಂತ ಪರಿಚಿತಳಾದಳು…
ಎಸ್…ಈಕೆಯ ಹೆಸರು ಮರಿಯಂ ರಫಾನ..ಕುರುಂಜಿ ವೆಂಕಟ್ರಾಮಣ ಗೌಡ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ..
ಈ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈಕೆ ಮಾಡಿದ ಸಾಧನೆ ಕೇವಲ ಮನೆಯವರಿಗೆ ಮಾತ್ರ ಅಲ್ಲ..ತಾನೂ ಕಲಿಯುತ್ತಿರುವ ಶಾಲೆ ಮತ್ತು ಸುಳ್ಯ ತಾಲೂಕಿನಲ್ಲೇ ಮಹಾ ಸಾಧನೆ ಮಾಡಿದ ಹೆಗ್ಗಳಿಕೆ ಈ ರಫಾನಾಳಿಗೆ ಸಲ್ಲುತ್ತದೆ..
ರಾಜ್ಯದೆಲ್ಲೆಡೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಳ್ಯದ ಸುವರ್ಣಿನಿ ಮರಿಯಂ ರಫಾನ 98.25% ಫಲಿತಾಂಶನ್ನು ಪಡೆದು ಸುಳ್ಯ ತಾಲೂಕಿನಲ್ಲೇ ದಾಖಲೆ ನಿರ್ಮಿಸಿದ್ದಾಳೆ.
ಈಕೆ ಕೇವಲ ಶಾಲಾ ಚಟುವಟಿಕೆಗಳಲ್ಲಿ ಮಾತ್ರ ವಿಜಯ ಪತಾಕೆ ಹಾರಿಸಿದಲ್ಲದೇ , ಗಾಂಧಿನಗರ ಮದರಸದ +2 ವಿದ್ಯಾರ್ಥಿ, ತನ್ನ ಸಾಧನೆಯನ್ನು ಮದರಸದಲ್ಲಿ ಕೂಡ ಮಾಡಿದ ಕೀರ್ತಿ ಈಕೆಯದು..ಇಲ್ಲಿ ಕೂಡ TOP + ಶ್ರೇಣಿಯನ್ನು ಪಡೆದು ತನ್ನ ಚಾಕಚಕ್ಯತೆಯನ್ನು ತೋರಿಸಿದ್ದಾಳೆ..
ಈ ಫಲಿತಾಂಶವನ್ನುಸುಳ್ಯ ನಾಡೇ ಹೆಮ್ಮೆಯಿಂದ ಸ್ವೀಕರಿಸಿದ್ದಾರೆ… ಈಕೆಯ ಫಲಿತಾಂಶದ ಬಗ್ಗೆ ಮತ್ತು ಈಕೆ ಓದಿನ ಚಟುವಟಿಕೆ ಬಗ್ಗೆ ಮಾತಾಡಿಸಿದಾಗ, ನಾನೇನು ಕಲಿಕೆಗೆ ವಿಶೇಷ ವೇಳಾಪಟ್ಟಿ ಏನು ಮಾಡಿಲ್ಲ,ರಾತ್ರಿ ಹೊತ್ತು ಒಂದಿಷ್ಟು ಓದಿ,
ಬೆಳಗ್ಗೆ ನಮಾಝ್ ಮುಗಿಸಿ ಮಾತ್ರ ಘಂಟೆ 5:30 ಯಿಂದ 7..30 ಘಂಟೆಯ ವರೆಗೆ ಓದುತ್ತಿದ್ದೆ ತರಗತಿಯಲ್ಲಿ ಮಾಡಿದ ಪಾಠವನ್ನು ಏಕಾಗ್ರತೆಯಿಂದ ಕೇಳುತ್ತಿದ್ದೆ… ನನ್ನ ಈ ವಿಜಯದ ಗುರಿಗೆ ಏಕಾಗ್ರತೆಯೇ ಮುಖ್ಯ ಕಾರಣ ಎನ್ನುತ್ತಾರೆ ಮರಿಯಂ ರಫಾನ…
ಈಕೆಯು ಒಟ್ಟು ಪಡೆದ 598 ಅಂಕದಲ್ಲಿ
*ಭೌತಶಾಸ್ತ್ರ100,
*ಗಣಿತ 100,
*ಇಂಗ್ಲಿಷ್ 95
*ಹಿಂದಿ 95,
*ರಸಾಯನ ಶಾಸ್ತ್ರ 98 ,
*ಜೀವಶಾಸ್ತ್ರ 95
ಹೀಗೆ ವಿಷೇಷ ಅಂಕ ಪಡೆದು ಸುಳ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ..
ಸುಳ್ಯ ರಥಬೀದಿಯಲ್ಲಿ ಸುಮಾರು 40 ವರ್ಷದಿಂದ ಅಝಾದ್ ವಾಚ್ ವರ್ಕ್ಸ್ ಎಂಬ ಸಂಸ್ಥೆಯನ್ನು ನಡೆಸುವ ಕೆ.ಪಿ ಅಬ್ದುಲ್ ರಹಿಮಾನ್ ( ವಾಚ್ ಬಾಬಚ್ಚ) ಮತ್ತು ಝೌರಾ ದಂಪತಿಗಳ ಪುತ್ರಿ.
ಕೆರೆಮೂಲೆ ಎಂಬಲ್ಲಿ ವಾಸವಿರುವ ಇಬ್ಬರು ಹೆಣ್ಣು ಮಕ್ಕಳಲ್ಲಿ ಮರಿಯಂ ರಫಾನ ಕೊನೆಯವಳು, ಈಕೆಯ ಅಣ್ಣ ‘ರಬಿಯು’ ಸಿವಿಲ್ ಇಂಜಿನಿಯರ್..
ಮುಂದಿನ ವಿದ್ಯಾಭ್ಯಾಸದಲ್ಲಿ ಒಂದು ಹಂತ ತಲುಪಬೇಕು.. ವೈದ್ಯಕೀಯ ಶಿಕ್ಷಣ ಪಡೆದು ಜನರ ಸೇವೆ ಮಾಡಬೆಕು ಎಂಬ ಹಂಬಲವೂ ಇದೆ..ಛಲವೂ ಇದೆ ಎನ್ನುತ್ತಾರೆ ಸುಳ್ಯದ ಸುವರ್ಣಿನಿ ಮರಿಯಂ ರಫಾನ..
ರಫಾನಾಳ ಮುಂದಿನ ವಿದ್ಯಾರ್ಥಿ ಜೀವನಕ್ಕೆ ನಮ್ಮದೊಂದು ಶುಭ ಹಾರೈಕೆ ಇರಲಿ…ಈಕೆಯ ಉಜ್ವಲ ಭವಿಷ್ಯಕ್ಕೆ ದೇವರಲ್ಲಿ ಪ್ರಾರ್ಥಿಸೊಣ,…