ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ಪೆರುವಾಜೆ ಗ್ರಾಮದ ಕುಂಡಡ್ಕ ಸ್ವಾಮಿ ಕೊರಗಜ್ಜ ದೈವ ಸ್ಥಾನದ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ವಿತರಣೆ ಕಾರ್ಯಕ್ರಮ ನಡೆಸಲಾಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಸಂತೋಷ್ ಕುಮಾರ್ ರೈ ಆಗಮಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿಯನ್ನು ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕುಂಬ್ರ ದಯಾಕರ ಆಳ್ವ ಅವರು ವಹಿಸಿದ್ದರು.ಗ್ರಾಮದ ಪ್ರಮುಖರಾದ ಕುಶಾಲಪ್ಪ ಗೌಡ ಅಡ್ಯತಕಂಡ ,ಮೇಲ್ವಿಚಾರಕರಾದ ಮುರಳಿಧರ ಎ ,ಒಕ್ಕೂಟದ ಅಧ್ಯಕ್ಷರಾದ ಹೊನ್ನಪ್ಪ ಕೆ ,ಸೇವಾಪ್ರತಿನಿಧಿ ಶ್ರೀಮತಿ ಯಶೋಧ ಸೇರಿದಂತೆ ಸುಮಾರು 60 ಮಂದಿ ಸದಸ್ಯರು ಭಾಗವಹಿಸಿದ್ದರು. ಸಾಂಕೇತಿಕವಾಗಿ ಆವರಣದಲ್ಲಿ ಗಿಡ ನಾಟಿ ಮಾಡಿ ಸದಸ್ಯರಿಗೆ ಗಿಡ ವಿತರಣೆ ಮಾಡಲಾಯಿತು .
- Tuesday
- December 3rd, 2024