Ad Widget

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆ

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆ
ಎಸ್ ಇ ಡಿ ಸಿ ಸುನ್ನಿ ಎಜುಕೇಶನಲ್ ಡೆವಲಪ್ಮೆಂಟ್ ಆಫ್ ಕಮಿಟಿ ಇದರ ರಾಜ್ಯಧ್ಯಕ್ಷ ಎಂಎಂ ಕಾಮಿಲ್ ಸಖಾಫಿ ರವರು ಕೊಡಗು ಎಮ್ಮೆಮಾಡು ದರ್ಗಾ ಶರೀಫ್ ಯಾತ್ರೆ ಮುಗಿಸಿ ಮರಳಿ ಮಂಗಳೂರಿನತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸುಳ್ಯ ಅನೆಗುಂಡಿ ಸಮೀಪ ಬರುತ್ತಿದ್ದಂತೆ ಅವರ ಸ್ವಿಫ್ಟ್ ಕಾರು ಇಂಜಿನ್ ಸಮಸ್ಯೆಗೆ ಒಳಗಾಗಿ ವಾಹನ ಕೆಟ್ಟು ನಿಂತಿತ್ತು. ಸಂಜೆ ವೇಳೆ ಆದ ಕಾರಣ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಮಹಿಳೆ ಹಾಗೂ ಸಣ್ಣ ಪುಟ್ಟ ಮಕ್ಕಳು ಜೊತೆಯಲ್ಲಿದ್ದು ಭಾರಿ ಮಳೆಗೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಮಾಹಿತಿ ತಿಳಿದ ಸುಳ್ಯ ಎಸ್ ವೈ ಎಸ್ ಸಂಘಟನೆಯ ಮುಖಂಡ ಅಬ್ದುಲ್ ಹಮೀದ್ ಸುಣ್ಣಮೂಲೆ ಕೂಡಲೇ ಸ್ಪಂದಿಸಿ ತಮ್ಮ ಸಹೋದರನ ಸಹಕಾರ ಪಡೆದು ಸ್ಥಳೀಯ ಕಾರು ಮೆಕಾನಿಕ್ ಅನ್ನು ಕರೆಸಿ ಕಾರನ್ನು ದುರಸ್ತಿಪಡಿಸಿ ಸಖಾಫಿ ರವರನ್ನು ಊರಿಗೆ ಪ್ರಯಾಣ ಬೆಳೆಸಲು ಸಹಕಾರಿ ಯಾಗಿದ್ದಾರೆ. ಇವರ ಸ್ಪಂದನೆಗೆ ಸಖಾಫಿ ಯವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading