ಕೊರೊನಾ ಹೆಮ್ಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಪುನಃ ಲಾಕ್ಡೌನ್ ಸೀಸನ್ 2 ನಾಳೆಯಿಂದ ಆರಂಭಿಸಿದೆ. ಇದು ಅನಿವಾರ್ಯ ಕೂಡ. ಆದರೇ ಈ ಲಾಕ್ ಡೌನ್ ನಿಂದಾಗಿ ಕೊರೊನಾ ಮಣಿಸಲು ಅಷ್ಟೇನೂ ಪರಿಣಾಮಕಾರಿಯಾಗಲೂ ಸಾಧ್ಯವಿಲ್ಲ ಎಂದು ಜನ ಸರಕಾರದ ಕ್ರಮವನ್ನು ಟೀಕಿಸುತ್ತಿದ್ದಾರೆ. ದಿನಸಿ, ಹಾಲು,ತರಕಾರಿ , ಬ್ಯಾಂಕ್ ಸೇರಿದಂತೆ ಅಗತ್ಯ ವಸ್ತುಗಳು ದಿನಂಪ್ರತಿ ಬೆಳಿಗ್ಗೆ 8 ರಿಂದ ಪೂರ್ವಾಹ್ನ 11ರವರೆಗೆ ತೆರೆದಿರುವುದರಿಂದ ಜನ ಮಮೂಲಿಯಂತೆ ಪೇಟೆಗೆ ಬರಬಹುದು, ದಿನಕ್ಕೊಂದು ಕಾರಣ ನೀಡಿ ಬಂದೇ ಬರುತ್ತಾರೆ. ಇಂದು ರಾಜ್ಯದ ವಿವಿಧೆಡೆ ಲಾಕ್ ಡೌನ್ ಇದ್ದರೂ ಜನರ ನಿಯಂತ್ರಿಸಲು ಪೋಲೀಸರು ಹರಸಾಹಸ ಪಡುತ್ತಿದ್ದರು. ಲಾಠಿ ಬೀಸುವುದು, ವೆಹಿಕಲ್ ಸೀಜ್ ಮಾಡುವ ಕೆಲಸ ಮಾಡುತ್ತಿದ್ದರು. ಇದಕ್ಕೆ ಕಾರಣ ಸರಕಾರದ ಲಾಕ್ಡೌನ್ ನೀತಿಯೇ ಕಾರಣ. ಬಂದ್ ಮಾಡಿದರೇ ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸಂಪೂರ್ಣ ಬಂದ್ ಮಾಡಬೇಕಿತ್ತು. ಆಗ ಜನ ಪೇಟೆಗೆ ಅನಗತ್ಯ ಬರಲು ಅವಕಾಶವಿರುವುದಿಲ್ಲ.
ಈ ಮಧ್ಯೆ ಕೃಷಿಕರ ಬೆನ್ನಿಗೆ ಮತ್ತೆ ಬರೆ ಬೀಳುವಂತಾಗಿದೆ. ಕೊಕ್ಕೋ ಬೆಳೆಗಾರರ ಪರವಿದ್ದ ಕ್ಯಾಂಪ್ಕೋ ನಾಳೆಯ ಲಾಕ್ಡೌನ್ ನೆಪವೊಡ್ಡಿ ಇಂದು ಖರೀದಿಸಿಲ್ಲ. ಕೆಲ ಖಾಸಗಿ ವರ್ತಕರು ಮಾತ್ರ ಕೊಕ್ಕೋ ಖರೀದಿಸಿ ರೈತರಿಗೆ ನೆರವಾಗಿದೆ. ಇನ್ನೂ ಒಂದು ವಾರ ಕೊಕ್ಕೋ ಬೆಳೆಗಾರಿಗೆ ಏನು ಮಾಡುವುದೆಂದು ಎಂದು ಚಿಂತೆಯಾಗಿದೆ. ರೈತರ ಹಿತ ಕಾಯಬೇಕಾದ ಸರಕಾರ ಹಾಗೂ ಕ್ಯಾಂಪ್ಕೋ ಬೆಳೆಗಾರರ ನೆರವಿಗೆ ಬರಬೇಕಾಗಿದೆ ಎಂದು ಸುರೇಶ್ ಉಜಿರಡ್ಕ ಒತ್ತಾಯಿಸಿದ್ದಾರೆ.