
ಕೋವಿಡ್- 19 ಮಹಾವ್ಯಾಧಿಯು ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪಾಸಿಟಿವ್ ವರದಿ ಬಂದು ಆಸ್ಪತ್ರೆಯು ಸೀಲ್ ಡೌನ್ ಆಗಿದ್ದರಿಂದ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸುಮಾರು 33ರಷ್ಟು ಡಯಾಲಿಸೀಸ್ ರೋಗಿಗಳು ಅತಂತ್ರ ಸ್ಥಿತಿಗೊಳಗಾಗಿದ್ದಾರೆ. ಈ ಬಗ್ಗೆ ತಕ್ಷಣ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಮಾನ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ತುರ್ತು ಕ್ರಮಕೈಗೊಂಡು ಬದಲಿ ವ್ಯವಸ್ಥೆ ಕಲ್ಪಿಸುವಂತೆ ಜುಲೈ 09 ರಂದು ಮನವಿ ಸಲ್ಲಿಸಿತು. ಕೂಡಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತವು ಶಾಸಕರ ನೇತೃತ್ವದಲ್ಲಿ ಜುಲೈ 10 ರಂದು ಸಮಾಲೋಚನಾ ಸಭೆ ನಡೆಸಿ ಡಯಾಲಿಸೀಸ್ ರೋಗಿಗಳಿಗೆ ತುರ್ತು ವ್ಯವಸ್ಥೆ ಕಲ್ಪಿಸಲು ತೀರ್ಮಾನ ಕೈಗೊಂಡಿದೆ. ಈ ಮೂಲಕ ಎಸ್.ಎಸ್.ಎಫ್ ಡಿವಿಷನ್ ಸಮಿತಿಯು ನೀಡಿದ ಮನವಿಗೆ ತುರ್ತು ಸ್ಪಂದನೆ ದೊರೆತಂತಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.