ಡೆಂಗ್ಯೂ ಮತ್ತು ಮಹಾಮಾರಿ ಕೊರೋನಾ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡುವುದು ಸುಳ್ಯ ನಗರ ಪಂಚಾಯಿತಿನ ಕರ್ತವ್ಯವಾಗಿರುತ್ತದೆ. ಆದರೇ ಆಗಾಗ ನೀರಿನ ಸಂಪರ್ಕದ ಒತ್ತಡ ಹೆಚ್ಚಾಗಿ ಪೈಪ್ ಒಡೆಯುತ್ತಿದೆ. ಈ ಹಿಂದೆ ಕಳಪೆ ಗುಣಮಟ್ಟದ ಪೈಪ್ ಅಳವಡಿಸಿರುವುದು ಇದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಆರ್ ಟಿ ಐ ಕಾರ್ಯಕರ್ತ ಡಿ. ಎಂ ಶಾರಿಕ್ ರವರು ಪ್ರತಿಕ್ರಿಯಿಸಿ ” ತಕ್ಷಣ ಅದನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ದುರಸ್ತಿ ಪಡಿಸಲು ಆಗ್ರಹಿಸಿದ್ದಾರೆ. ಆದರೆ ಇದೀಗ ಕುಡಿಯುವ ನೀರಿಗಾಗಿ ಸುಳ್ಯದ ಜನತೆ ನಗರಪಂಚಾಯಿತಿ ಆಶ್ರಯಿಸಿರುವುದರಿಂದ ನಗರ ಪಂಚಾಯಿತಿ ಸದಸ್ಯರು ಮತ್ತು ಆಡಳಿತಾಧಿಕಾರಿಗಳು ಮುತುವರ್ಜಿ ವಹಿಸಿ ಶುದ್ಧವಾದ ಕುಡಿಯುವ ನೀರು ಮತ್ತು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕಾರ್ಯಕರ್ತರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
- Wednesday
- November 27th, 2024