Ad Widget

ಆದರ್ಶ ಗ್ರಾಮದಲ್ಲಿ ಆದರ್ಶ ಮೆರೆದ ಯುವಬ್ರಿಗೇಡ್ – ಅಂಧ ಕೂಲಿ ಕಾರ್ಮಿಕನಿಗೆ ಅರಮನೆ ಹಸ್ತಾಂತರ ಮಾಡಿದ ಚಕ್ರವರ್ತಿ

ಟಾರ್ಪಲ್ ಹಾಸಿದ ಜೋಪಡಿಯಲ್ಲಿ ವಾಸಿಸುತ್ತಿದ್ದ ಅಂಧವ್ಯಕ್ತಿಗೆ ಇಂದು ಅರಮನೆ ಸಿಕ್ಕಂತಹ ಸಂತೋಷ. ಆ ವ್ಯಕ್ತಿಯೇ ಕಡಬ ತಾಲೂಕಿನ  ಕೇನ್ಯ ಗ್ರಾಮದ ಪೆರ್ಲಕಟ್ಟೆ ನಿವಾಸಿ ಲಿಂಗು.  ಇವರ ಸಂತೋಷಕ್ಕೆ ಕಾರಣಕರ್ತರಾಗಿದ್ದು ರಾಷ್ಟೀಯತೆಯನ್ನು ಉಸಿರಾಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ದೇಶಾಭಿಮಾನಿಗಳ ಯುವ ತಂಡ ಯುವ ಬ್ರೀಗೇಡ್.

. . . . . .
ಯುವ ಬ್ರೀಗೇಡ್ ತಂಡದೊಂದಿಗೆ ಚಕ್ರವರ್ತಿ


ಅಂಧವ್ಯಕ್ತಿಯಾಗಿದ್ದರೂ ಆತನದ್ದು ಸ್ವಾವಲಂಬಿ ಸ್ವಾಭಿಮಾನದ ಬದುಕು. ಜೊತೆಯಲ್ಲಿ ಯಾರೂ ಇಲ್ಲ. ಯುವಾ ಬ್ರಿಗೇಡ್ ತಂಡ  ಆತನ ಕಥೆ ಕೇಳಿದಾಗ ಗೊತ್ತಾಯಿತು ಪಡಿತರ ಚೀಟಿಯೂ  ಇಲ್ಲದ ಆದರ್ಶ ಗ್ರಾಮದ ಕೊನೆಯ ಪ್ರಜೆ ಎಂದು. ಈ ಬಗ್ಗೆ ಸ್ಥಳೀಯಾಡಳಿತದೊಂದಿಗೆ ಕೇಳಿದರೇ ವೈಜ್ಞಾನಿಕ ಕಾರಣ ಕೊಟ್ಟಿರಲೂಬಹುದು. ಈ ಮಳೆ ಗಾಳಿಗೆ ಆ ಜೋಪಡಿಯಲ್ಲಿ ಒಬ್ಬ ಅಂಧವ್ಯಕ್ತಿ ಹೇಗೆ ವಾಸಿಸುತ್ತಿರಬಹುದೆಂಬುದು ಊಹಿಸಲಿಕ್ಕೂ ಅಸಾಧ್ಯ. ಸುಮಾರು 50 ವರ್ಷದ ಇವರು ಅವಿವಾಹಿತರಾಗಿದ್ದು, ಅಡಕೆ ಸುಲಿಯುವ ಕಾಯಕ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ . ಹೊಳೆಯಿಂದ ನೀರು ತಂದು ಸ್ವಂತ ಅಡುಗೆ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸಂಬಂಧಿಕರಾದ ಲಲಿತಾ ಅವರು ಕಳೆದ ನಾಲ್ಕು ವರ್ಷದ ಹಿಂದೆ ನಿರ್ಮಿಸಿಕೊಟ್ಟ ಟರ್ಪಾಲಿನ ಜೋಪಡಿಯಲ್ಲಿ ಒಬ್ಬನೇ ಜೀವನ ಸಾಗಿಸುತ್ತಿದ್ದು, ಸಹೋದರನ ಪುತ್ರ ಆಪತ್ಕಾಲದಲ್ಲಿ ಸಹಕಾರ ನೀಡುತ್ತಿದ್ದಾರೆ. ಕಷ್ಟದಿಂದ ಜೀವನ ಸಾಗಿಸುವ ಅವರ ಬಳಿ ಪಡಿತರ ಚೀಟಿ ಇಲ್ಲದೇ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಹೇಗಿದ್ದಿರಬಹುದು. ಅಲ್ಲದೆ ಸರ್ಕಾರದ ಯಾವುದೇ ಸವಲತ್ತು ದೊರಕಿಲ್ಲ , ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ  ಸಹಕಾರ ದೊರಕಿದೆ ಎನ್ನುತ್ತಾರೆ ಅವರು.

ಹಳೆ ಜೋಪಡಿಯಲ್ಲಿ ಲಿಂಗು
ನೂತನ ಮನೆ

ಇದನ್ನು ಗಮನಿಸಿದ ಕಡಬದ ಯುವಾ ಬ್ರಿಗೇಡ್ ತಂಡ ಇವರಿಗೆ ನೂತನ ಮನೆಯೊಂದನ್ನು ದಾನಿಗಳ ಸಹಕಾರದೊಂದಿಗೆ ನಿರ್ಮಿಸಿ ಕೊಟ್ಟಿದೆ. ಯುವಾ ಬ್ರಿಗೇಡ್ ನಿರ್ಮಿಸಿಕೊಟ್ಟ ಮನೆಗೆ ‘ನಮ್ಮನೆ’ ಎಂದು ಹೆಸರನ್ನಿಟ್ಟು ಗೃಹಪ್ರವೇಶ ಮಾಡಲಾಯಿತು. ಯುವಾಬ್ರಿಗೇಡ್ ಸಂಸ್ಥಾಪಕರಾದ  ಚಕ್ರವರ್ತಿ ಸೂಲಿಬೆಲೆಯವರು ಮನೆಯನ್ನು ಲಿಂಗು ಅವರಿಗೆ ಹಸ್ತಾಂತರಿಸಿದರು.ಬಡ ವ್ಯಕ್ತಿಗೆ ಸೂರು ನಿರ್ಮಿಸಿ ಕೊಡುವ ಮೂಲಕ ಕಡಬದ ಯುವ ಬ್ರಿಗೇಡ್ ಆದರ್ಶ ಗ್ರಾಮದಲ್ಲಿ ಆದರ್ಶತೆಯೊಂದಿಗೆ ಮಾನವೀಯತೆ ಮೆರೆದಿದೆ . 

ಯುವ ಬ್ರಿಗೇಡ್ ವಿಭಾಗ ಸಂಚಾಲಕ ತಿಲಕ್ ಶಿಶಿಲ ಅವರ ನೇತೃತ್ವದಲ್ಲಿ ಯುವ ಬ್ರಿಗೇಡ್ ಸದಸ್ಯರಾದ ಹರ್ಷ , ಹೃತಿಕ್ , ಕಾರ್ತಿಕ್ , ಮಿಥುನ್ , ಸುನೀಲ್ , ಸ್ಥಳಿಯರಾದ ಸದಾನಂದ , ವಿಶ್ವನಾಥರ ಸಹಕಾರದಲ್ಲಿ ದಾನಿಗಳ ನೆರವಿನಿಂದ ಲಿಂಗು ಅವರಿಗೆ ನೂತನ ನಿವಾಸ “ನಮ್ಮನೆ”ಯನ್ನು ನಿರ್ಮಾಣ ಮಾಡಲಾಗಿದೆ‌. ಇವರಿಗೆ ಸುಬ್ರಹ್ಮಣ್ಯ ಯುವ ಬ್ರಿಗೇಡ್‌ನ ಸೂರ್ಯನಾರಾಯಣ ಭಟ್ , ರಮೇಶ್ ಭಟ್, ಕೃಷ್ಣರಾಜ್ ಮತ್ತು ಶ್ರೀಕುಮಾರ್‌ ಸಹಕಾರ ನೀಡಿದ್ದರು. ಈ ಕಾರ್ಯಕ್ಕೆ  ದಾನಿಗಳಾದ ಹರೀಶ್ ರೈ ಉಬರಡ್ಕ, ರಾಮಕುಂಜದ  ಪೊಲೀಸ್ ಸಿಬ್ಬಂದಿ ರೋಹಿತ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಾಮಸ್ಥರಾದ ಸುಬ್ರಮಣ್ಯ ಕುಳ, ನಾಗೇಶ್ ಕಡಬ, ಊಟದ ವ್ಯವಸ್ಥೆ ಮಾಡಿದ ಕಡಬದ ಅನ್ನಪೂರ್ಣ ಹೋಟೆಲ್ ನ ಮುತ್ತು ಕುಮಾರ್ ಕೈಜೋಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!