Ad Widget

ವ್ಯಾಪಕವಾಗುತ್ತಿರುವ ಕೊರೋನಾ ಪ್ರಕರಣ ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ- ಎಸ್.ಡಿ.ಪಿ.ಐ

ಡಯಾಲಿಸಿಸ್ ರೋಗಿಗಳಿಗೆ ಸುಳ್ಯದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

. . . . . . . . .

ಸುಳ್ಯ ತಾಲೂಕಿನಲ್ಲಿ ದಿನಕಳೆದಂತೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ, ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನರ್ಸ್ ಗಳಿಗೂ ವೈರಸ್ ತಗುಲಿದ ಕಾರಣ ಸರ್ಕಾರಿ ಆಸ್ಪತ್ರೆಯೆ ಸೀಲ್ ಡೌನ್ ಗೆ ಒಳಗಾಗಿದೆ.ಬಡ ರೋಗಿಗಳು ಪರದಾಡ್ತಾ ಇದ್ದಾರೆ, ಹಾಗೂ ಡಯಾಲಿಸಿಸ್ ರೋಗಿಗಳ ಬವಣೆಯನ್ನು ಆಲಿಸುವವರೆ ಇಲ್ಲದಂತಾಗಿದೆ.ಕೊರೋನಾ ನಿಯಂತ್ರಣಕ್ಕೆ ಮತ್ತು ಆಸ್ಪತ್ರೆ ಸೀಲ್ ಡೌನ್ ಆದ ಕಾರಣ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದ್ದ ಕ್ಷೇತ್ರದ ಶಾಸಕರು ಹಾಗು ಸ್ಥಳೀಯಾಡಳಿತಗಳು ಇದಕ್ಕೂ ತಮಗೂ ಸಂಬಂದವೇ ಇಲ್ಲದಂತೆ ವರ್ತಿಸಿ ಮೌನ ವಹಿಸಿರುವುದು ಖಂಡನೀಯವಾಗಿದೆ.
ಆಸ್ಪತ್ರೆ ಸೀಲ್ ಡೌನ್ ಆಗಿರುವ ಕಾರಣ ಇತ್ತೀಚಿನಿಂದ ಆಸ್ಪತ್ರೆಗೆ ಬೇಟಿ ನೀಡಿದ ಹಲವಾರು ಸಾರ್ವಜನಿಕರು ಹಾಗು ರೋಗಿಗಳು ಭಯದಿಂದ ಕಾಲ ಕಳೆಯುವ ಪರಿಸ್ಥಿತಿ ಬಂದಿದೆ.ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ವಿವಿಧ ರೀತಿಯ ಮೆಸೇಜ್ ಗಳು ರವಾನೆಯಾಗ್ತಾ ಇದೆ.ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಾದ ಮತ್ತು ಜನಸಾಮಾನ್ಯರಿಗೆ ಅಭಯ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸ್ಥಳೀಯ ಶಾಸಕರು,ನಗರ ಪಂಚಾಯತ್ ಆಡಳಿತ, ತಾಲೂಕು ಪಂಚಾಯತ್ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿರುವುದು ಜನಸಾಮಾನ್ಯರನ್ನು ಇನ್ನಷ್ಟು ಭಯಗೊಳ್ಳುವಂತೆ ಮಾಡಿದೆ.
ಆದ್ದರಿಂದ ಇನ್ನಾದರು ಸಂಬಂಧಪಟ್ಟ ಎಲ್ಲಾ ಜನಪ್ರತಿನಿದಿಗಳು ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವ್ರತರಾಗಬೇಕು ಹಾಗೂ ಪ್ರಮುಖವಾಗಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸುಳ್ಯದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading