ಸಂಪಾಜೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ವಿನುತ್ ಉತ್ತಮ ಸೇವೆ ನೀಡಿ ಸಂಪಾಜೆಯ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇವರನ್ನು ಹುಡುಕಿಕೊಂಡು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಇವರ ಬಗ್ಗೆ ಕಳೆದ ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯಲ್ಲಿ ಇವರ ಉತ್ತಮ ಸೇವೆಗೆ ಲೇಖನವು ಪ್ರಕಟಗೊಂಡಿತ್ತು. ಗರ್ಭಿಣಿ ಮಹಿಳೆಯರ ಹೆರಿಗೆಯ ವಿಷಯದಲ್ಲಿ ತುಂಬಾ ಹೆಸರುವಾಸಿಯಾಗಿದ್ದ ವೈದ್ಯರು ಕೆಲವೇ ವರ್ಷದಲ್ಲಿ ಸಂಪಾಜೆಯ ಆಸ್ಪತ್ರೆಯನ್ನು ಗುರುತಿಸುವಂತೆ ಮಾಡಿಕೊಂಡಿದ್ದರು.
ಇವರ ಸೇವೆ ಸಂಪಾಜೆ ಆಸ್ಪತ್ರೆಯಲ್ಲಿ ಬೇಕು ಮತ್ತು ಬೇಡ ಎಂಬ ಚರ್ಚೆಗಳು ಕಳೆದ ಎರಡು ಮೂರು ತಿಂಗಳಿನಿಂದ ನಡೆಯುತ್ತಿದ್ದವು. ಇದರ ಬಗ್ಗೆ ಅಮರ ಸುಳ್ಯ ಸುದ್ದಿ ಪತ್ರಿಕೆಯಿಂದ ವೈದ್ಯರನ್ನು ಸಂಪರ್ಕಿಸಿದಾಗ, ನನ್ನ ನಿಷ್ಕಳಂಕ ಸೇವೆಯನ್ನು ಯನ್ನು ನಾನು ಇಲ್ಲಿಗೆ ಬರುವ ಎಲ್ಲ ರೋಗಿಗಳಿಗೂ ಸಮಾನರೀತಿಯಲ್ಲಿ ನೀಡಿರುತ್ತೇನೆ. ನನ್ನ ಕರ್ತವ್ಯವನ್ನಷ್ಟೇ ನಾನು ಪಾಲಿಸಿದ್ದೇನೆ.ವರ್ಗಾವಣೆಯ ವಿಷಯದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ .ಈ ರೀತಿಯಾದರೆ ಸಂತೋಷವಾಗಿ ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಲೇಖನಗಳು ವೈದ್ಯರ ಪರವಾಗಿ ಹರಿದಾಡ ತೊಡಗಿದವು. ವೈದ್ಯರ ವರ್ಗಾವಣೆಯಲ್ಲಿ ರಾಜಕೀಯ ಮತ್ತು ಕೆಲವು ಸಂಸ್ಥೆಗಳು ಭಾಗಿಯಾಗಿದೆ ಎಂದು ಲೇಖನಗಳು ಹರಿದಾಡುತ್ತಿತ್ತು.
ಒಟ್ಟಿನಲ್ಲಿ ಯಾವುದೇ ವೈದ್ಯರು ಆಸ್ಪತ್ರೆಗೆ ಬಂದರೆ ಉತ್ತಮ ಸೇವೆ ಲಭಿಸಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ. ಇವರ ಬದಲಿಗೆ ಸಂಪಾಜೆ ಆರೋಗ್ಯ ಕೇಂದ್ರದ ವೈದ್ಯರಾಗಿ ಮಂಗಳೂರಿನಿಂದ ಕರಣ್ ರೈ ಬಂದಿರುತ್ತಾರೆ ಎಂದು ತಿಳಿದುಬಂದಿದೆ.
- Thursday
- November 21st, 2024