ಸುಳ್ಯದಲ್ಲಿ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಕಲೀಲ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಂಧಾನಕಾರರ ನೇತೃತ್ವದಲ್ಲಿ ಎರಡು ಬಾರಿ ಮಾತುಕತೆ ಮತ್ತು ಚರ್ಚೆಗಳು ನಡೆದಿದ್ದು, ಮುಂದಿನ 15 ದಿನಗಳಲ್ಲಿ
ದಾಖಲೆಗಳನ್ನು ಸಂಗ್ರಹಿಸಿ ತರುವಂತೆ ಕಲೀಲ್ ರವರಿಗೆ ಸಂಧಾನಕಾರರ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಇದೀಗ ಕಲೀಲ್ ಮತ್ತು ಮನೆಯವರು ಹೈಕೋರ್ಟಿಗೆ ಮಹಿಳಾ ಆಯೋಗದ ನೋಟೀಸಿಗೆ ತಡೆಯಾಜ್ಞೆ ಕೋರಿದ್ದು ಆಸಿಯ ರವರು ಕಲೀಲ್ ರವರೊಂದಿಗೆ ಮದುವೆಯಾದ ಯಾವುದೇ ದಾಖಲೆಗಳು ಇಲ್ಲ, ಹಾಗೂ ಮಹಿಳಾ ಆಯೋಗ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದೆ ಎಂದು ಕೋರ್ಟಿನಿಂದ ತಡೆಯಾಜ್ಞೆ ಜಾರಿಗೊಂಡಿದೆ ಎಂದು ತಿಳಿದುಬಂದಿದೆ. ಸುಳ್ಯ ಮೂಲದ ಡಿ ಕೃಷ್ಣಮೂರ್ತಿ ವಕೀಲರು ಕರ್ನಾಟಕ ಹೈಕೋರ್ಟಿನಲ್ಲಿ ಕಲೀಲ್ ರವರ ಪರವಾಗಿ ವಾದಿಸಿದ್ದರು ಎನ್ನಲಾಗಿದೆ.
ನ್ಯಾಯಾಧೀಶರಾದ ಕೃಷ್ಣ ದೀಕ್ಷಿತ್ ರವರ ಏಕಸದಸ್ಯ ಪೀಠದಲ್ಲಿ ಈ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿದುಬಂದಿದೆ.