ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಗಿ ನಾಗೇಶ್ ಕುಂದಲ್ಪಾಡಿ ಇಂದು ಆಯ್ಕೆಯಾಗಿದ್ದಾರೆ. ಇವರು ಹಾಲಿ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯರಾಗಿ, ಪೆರಾಜೆ ಪಯಸ್ವಿನಿ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೆರಾಜೆ ಗ್ರಾ.ಪಂ.ಅಧ್ಯಕ್ಷ ರಾಗಿ ಸ್ವಗ್ರಾಮ ಅಭಿವೃದ್ಧಿ ಗೆ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೇ ಎ.ಬಿ.ವಿ .ಪಿ ಯ ಮಂಗಳೂರು ವಿಶ್ವ ವಿದ್ಯಾನಿಲಯದ ಕಾರ್ಯದರ್ಶಿಯಾಗಿ , ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ ,ಬಳಿಕ ಅಧ್ಯಕ್ಷರಾಗಿ ,ತಾಲೂಕು ಪಂಚಾಯತ್ ಅಧ್ಯಕ್ಷರಾಗಿ,ಆರೋಗ್ಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ,ಹಾಲಿ ಸದಸ್ಯರಾಗಿ ,ಕೊಡಗು ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕರಾಗಿ ,ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾಗಿ , ಪೆರಾಜೆ ಅಮೆಚೂರ್ ಬೆಟ್ಟದಪುರ ಶ್ರೀ ದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ,ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ ಇದರ ನಿರ್ದೇಶಕರಾಗಿ , ಪ್ರಸ್ತುತ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಥಮ ಅಧ್ಯಕ್ಷರಾಗಿಯೂ,ಪೆರಾಜೆ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಗೌರವ ಅಧ್ಯಕ್ಷರಾಗಿ, ಪೆರಾಜೆ ಜ್ಯೋತಿ ವಿದ್ಯಾ ಸಂಘದ ಕಾರ್ಯದರ್ಶಿಯಾಗಿ ಸಾಮಾಜಿಕ , ರಾಜಕೀಯ,ಸಹಕಾರಿ ಹೀಗೇ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ,ಪೆರಾಜೆ ಪಂಚಾಯತ್ ನಲ್ಲಿ ಭಾ .ಜಾ .ಪ ಆಡಳಿತಾಚರಣೆಯ 25 ವರ್ಷದ ಬೆಳ್ಳಿ ಹಬ್ಬದ ಆಚರಣೆಯನ್ನು ಶ್ರೀ ಯುತರ ನೇತ್ರತ್ವದಲ್ಲಿ ಇತ್ತೀಚಿಗೆ ಆಚರಿಸಲಾಗಿತ್ತು.