
ಜುಲೈ 7 ರಂದು ಬಳ್ಪದಿಂದ ಎಣ್ಣೆಮಜಲಿಗೆ ಹೋಗುವ ರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್ ಸಿಕ್ಕಿತ್ತು. ಬ್ಯಾಗ್ ಸಿಕ್ಕಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಬ್ಯಾಗ್ ಕಳೆದುಕೊಂಡ ಬಳ್ಪ ಗ್ರಾಮದ ಎಣ್ಣೆಮಜಲು ಜೋಸೆಫ್ ಗೆ ತಿಳಿದು ಪಂಜ ಗ್ರಾಮ ಪಂಚಾಯತ್ ಗೆ ಬಂದು ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಅವರಿಂದ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದರು.