ಶಿಲ್ಪಕಲೆಯ ಮೀರಿಸುವಂತಿದೆ ಗೆರಟೆಯ ಮೇಲಿನ ಕೈಚಳಕ – ಶಿಕ್ಷಕರ ಕಲ್ಪನೆಗೆ ಅರಳಿದ ಕಲಾಕೃತಿಗಳ ಒಂದು ಪರಿಚಯ


ಗೆರಟೆಯಿಂದ ರಚನೆಯಾದ ಕಲಾಕೃತಿ

ಎಲ್ಲಿಯೋ ಬಿಸಾಡಿ ಹೋಗುವ, ಒಲೆ ಸೇರಿ ಬೂದಿಯಾಗುವ ಗೆರಟೆಗೆ ಕಲಾತ್ಮಕತೆ ಕೊಟ್ಟರೇ ಹೇಗೆ ಶೋಕೇಸ್ ಸೇರುವುದೆಂದೂ ನಿಮಗೆ ಗೊತ್ತೆ. ಅಮರ ಸುದ್ದಿ ಈ ಬಗ್ಗೆ ಎಲೆಮರೆಯ ಕಾಯಿಯಂತಿದ್ದ ಚಿತ್ರಕಲಾ ಶಿಕ್ಷಕರೊಬ್ಬರ ಕಲೆಯ ಮೇಲೆ ಬೆಳಕು ಚೆಲ್ಲಿದೆ.ತೆಂಗಿನಕಾಯಿಯ ಗೆರಟೆಗೆ ಚಿತ್ರಕಲಾ ಶಿಕ್ಷಕರ ಕೈಗೆ ಸಿಕ್ಕಿದರೇ ಏನೆಲ್ಲಾ ಆಕರ್ಷಣಿಯ ವಸ್ತುವನ್ನಾಗಿ ಮಾಡುಬಹುದು ಎಂದು ಇಲ್ಲಿದೇ ನೋಡಿ.
ಮರ್ಕಂಜದ ಗ್ರಾಮದ ಕೊಚ್ಚಿ ಮನೆ ಧನಂಜಯ ಚಿತ್ರಕಲಾ ಶಿಕ್ಷಕರಾಗಿ, ಭಿನ್ನವಾಗಿ ಚಿಂತಿಸಿ , ತನ್ನ ಕಲಾಪ್ರೌಢಿಮೆ ಸೇರಿಸಿ ಹಲವು ರೂಪಗಳಲ್ಲಿ ಗೆರಟೆಯನ್ನು ಆಕರ್ಷಣಿಯವಾಗಿಸಿದ್ದಾರೆ. ಗೆರಟೆಯನ್ನು ಬಿಸಾಡದೇ ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರು ಪ್ರಸ್ತುತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಧನಂಜಯ ಅವರು ಗೆರಟೆಯಲ್ಲಿ ಹಲವು ದಿನಬಳಕೆ ವಸ್ತುಗಳನ್ನು ತಯಾರಿಸಿದ್ದಾರೆ . ತನ್ಮೂಲಕ ಮೂಲೆ ಸೇರುತ್ತಿದ್ದ ಗೆರಟೆಯ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ . ಅವರು ಹಲವು ವರ್ಷಗಳಿಂದ ಈ ಪ್ರಯತ್ನದಲ್ಲಿ ಎನೇನು ತಯಾರಿ ಮಾಡಿದ್ದಾರೆ ಎನ್ನುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

. . . . . . . . .

ಕಲೆಗೆ ಸಾವಿಲ್ಲ, ರೋಗವಿಲ್ಲ,ಹಸಿವಿಲ್ಲ ಎನ್ನುವುದಕ್ಕೆ ಈ ಲಾಕ್ ಡೌನ್ ವೇಳೆಯಲ್ಲೂ ಸೃಜನಶೀಲ ಕಲಾ ಶಿಕ್ಷಕರ ಕೈಯಲ್ಲಿ ರೂಪುಗೊಂಡ ಕಲಾಕೃತಿ ಗಳೇ ಸಾಕ್ಷಿ. ಗೆರಟೆಯಲ್ಲಿ ಕೈ ಬಳೆ , ಪೆನ್‌ಸ್ಟ್ಯಾಂಡ್ , ಮೊಬೈಲ್ ಸ್ಯಾಂಡ್ , ಕುಂಕುಮ ಬಾಕ್ಸ್ ಮೇಣದ ಬತ್ತಿ ಸ್ಯಾಂಡ್ , ಪತ್ರ ಸಂಗ್ರಹದ ಬಾಕ್ಸ್‌ ಮೀನಿನ ಆಕೃತಿ , ಉಪ್ಪಿನಕಾಯಿ ಭರಣಿ , ಚಮಚ , ಆಭರಣ ಪೆಟ್ಟಿಗೆ ,ಉಂಗುರ ಮುಂತಾದವುಗಳನ್ನು ತಯಾರಿಸಿದ್ದಾರೆ . ಇನ್ನೂ ಹತ್ತಾರು ಬಗೆಯ ವಸ್ತುಗಳ ತಯಾರಿಕೆಗೂ ಯೋಚನೆ ರೂಪಿಸಿದ್ದು ದೇಶೀ ಪರಿಕರದ ಬಹೂಪಯೋಗಿ ಸಂಗತಿಗಳನ್ನು ತೆರೆದಿಡುವ ಪ್ರಯತ್ನದಲ್ಲಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ವೇದಿಕೆ ನಿರ್ಮಾಣ ಮಾಡಿದ್ದಾರೆ. ಇವರು ತಯಾರಿಸಿದ ಚಿಕನ್ ಗುನ್ಯಾ ಛದ್ಮವೇಶ ಮೆಚ್ಚುಗೆ ಗಳಿಸಿತ್ತು

. . . . . . .

ಪೇಪರ್, ಥರ್ಮಾಕೂಲ್,ಹಳೆ ಬಲ್ಬ್,ಅಡಿಕೆ ಹಾಳೆಯಿಂದ ರಚನೆಯಾಗಿರುವುದು.

ಇವರು ಚಿತ್ರಕಲೆಯ ಜತೆ ನಾಟಕ , ಯಕ್ಷಗಾನ ಕ್ಷೇತ್ರದಲ್ಲೂ ಕೈಚಳಕ ಪ್ರದರ್ಶಿಸಿಸಿದ್ದಾರೆ. ಇವರ ಅಣ್ಣ ಭೋಜಪ್ಪ ಕೊಚ್ಚಿ ಯಕ್ಷಗಾನ ಕಲಾವಿದರು. ಗೆರಟೆ, ಬಲ್ಬ್ ಹಾಗೂ ಬೀಸಾಡುವ ಅನೇಕ ವಸ್ತುಗಳಿಂದ ಕಲಾಕೃತಿ ಮಾಡುತ್ತಿದ್ದಾರೆ. ಸವಣೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಎಲ್ಲಾ ವಸ್ತುಗಳ ಪ್ರದರ್ಶನ ಮಾಡಿದ್ದಾರೆ. ಶಿಕ್ಷಕರಿಗೆ ಭೋದನ ಉಪಕರಣ ತಯಾರಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಸವಣೂರು ಡಿ.ಎಡ್ ವಿಧ್ಯಾರ್ಥಿಗಳಿಗೆ ಚಿತ್ರಾಕ್ಷರ ಪದಬಂದ ನಡೆಸಿ ಹೊಸ ಅಭಿರುಚಿ ಹುಟ್ಟುಹಾಕಿದ್ದರು. ಎಲ್ಲವನ್ನೂ ಸ್ವಂತ ಕ್ರಿಯೇಟಿವ್ ಮಾಡುವ ಹವ್ಯಾಹ ಬೆಳೆಸಿಕೊಂಡಿದ್ದಾರೆ. ಇವರಿಗೆ ಎಲ್ಲಾ ಕಲಾ ಚಟುವಟಿಕೆಗಳಿಗೆ ಪುತ್ರ ತನಯ್, ಪತ್ನಿ ಸವಣೂರಿನಲ್ಲಿ ಶಿಕ್ಷಕಿಯಾಗಿರುವ ಚೇತನಾ ಕೈ ಜೋಡಿಸಿದ್ದಾರೆ.
ಮಂಗಳೂರಿನ ಮಹಾಲಸ ಚಿತ್ರಕಲಾ ಕಾಲೇಜಿನಲ್ಲಿ ಚಿತ್ರಕಲಾ ಪದವಿ ಪಡೆದಿರುವ ಇವರು ಸಾಹಿತ್ಯ ಸಮ್ಮೇಳನ, ತುಳು ಸಮ್ಮೇಳನ, ಕೃಷಿ ಸಮ್ಮೇಳನ,ರಾಜ್ಯಮಟ್ಟದ ಕಲಾರಶ್ಮಿ ಉತ್ಸವ,ಬ್ರಹ್ಮಕಲಶೋತ್ಸವ,ಪ್ರತಿಭಾಕಾರಂಜಿ,ಯುವಜನೋತ್ಸವ ಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಪ್ರತಿಬಾ ಕಾರಂಜಿ, ಯುವಜನೋತ್ಸವ ಗಳಲ್ಲಿ ರಾಜ್ಯ ಮಟ್ಟದ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.ಥರ್ಮೋಪೋಮ್ ಆರ್ಟ್ನಲ್ಲಿ ರಾಷ್ಟಮಟ್ಟದ ಸಂಪನ್ಮೂಲ ವ್ಯಕ್ತಿ ಗುರುತಿಸಿಕೊಂಡಿದ್ದಾರೆ. ಇವರು ನಿರ್ದೇಶಿಸಿದ “A. Man” ನಾಟಕ ಯುವಜನೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಇವರ ಕಲ್ಪನೆಯ ಛದ್ಮವೇಶಗಳು ತಾಲೂಕು,ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರಶಸ್ಥಿ ಗಳಿಸಿತ್ತು.
ಪೇಪರ್ ಕ್ರಾಪ್ಟ್, ಕ್ಲೆಮಾಡೆಲಿಂಗ್,ಕಸದಿಂದ ರಸ, ಬೋಧನೋಪಕರಣ ತಯಾರಿ, ನಾಟಕ ಯಕ್ಷಗಾನ, ಬೀದಿನಾಟಕಗಳು ಹವ್ಯಾಸಗಳಾಗಿವೆ.ತಾಲೂಕು,ಜಿಲ್ಲಾ,ಕನ್ನಡ ಸಾಹಿತ್ಯ ಸಮ್ಮೇಳನಗಳು, ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಸಂದರ್ಶನ: ಮುರಳೀಧರ ಅಡ್ಡನಪಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading