Ad Widget

ಸೆಂಚುರಿ ಬಾರಿಸಿದ ಸಂಡೇ- ದ.ಕ.ದಲ್ಲಿ ಒಂದೇ ದಿನ 147 ಮಂದಿಗೆ ಸೋಂಕು ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ಗಂಭೀರತೆಯತ್ತ ಹೊರಳುತ್ತಿದ್ದು, ಭಾನುವಾರ ಮೊದಲ ಬಾರಿಗೆ ಪಾಸಿಟಿವ್ ಪ್ರಕರಣ ಶತಕದ ಗಡಿ ದಾಟಿದೆ.
ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ದಾಖಲೆಯ 147 ಮಂದಿಗೆ ಕೊರೋನಾ ದೃಢಪಟ್ಟಿದ್ದು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1232 ಕ್ಕೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಭಾನುವಾರ 147 ಪ್ರಕರಣಗಳ ಪೈಕಿ 53 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇವರಲ್ಲಿ ರ್‍ಯಾಂಡಮ್ ಪರೀಕ್ಷೆ, ಸರ್ಜರಿ ಪೂರ್ವ ಪರೀಕ್ಷೆ, ಹೆರಿಗೆಗೆ ಮುನ್ನ ನಡೆಸಿದ ಪರೀಕ್ಷೆ ಒಳಗೊಂಡಿದೆ. ಶೀತಜ್ವರದ ಲಕ್ಷಣವಿದ್ದ 40 ಮಂದಿಗೆ ಸೋಂಕು ಪತ್ತೆಯಾಗಿದೆ. ಉಸಿರಾಟದ ಸಮಸ್ಯೆಯಿದ್ದ ಇಬ್ಬರಿಗೆ ಕೊರೋನಾ ದೃಢಪಟ್ಟಿದೆ. ವಿದೇಶ, ಹೊರರಾಜ್ಯದಿಂದ ಆಗಮಿಸಿದ 15 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಸೋಂಕಿತರ ಸಂಪರ್ಕದಿಂದ 35 ಮಂದಿಗೆ ಕೊರೋನಾ ವಕ್ಕರಿಸಿದೆ. ಹಡಗಿನಲ್ಲಿ ಮಲೇಷ್ಯಾದಿಂದ ಆಗಮಿಸಿದ ಇಬ್ಬರಿಗೆ ಸೋಂಕು ತಟ್ಟಿದೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!