
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ
ಕೇಂದ್ರ ,ಹಾಗೂ ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಎ ಐ ಸಿ ಸಿ ಮಾಜಿ ಅದ್ಯಕ್ಷರು ಕೊರೊನ ಮಹಾಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು . ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೊರೊನಾ ಸೋಂಕಿತರಿದ್ದಾಗ ನಮ್ಮ ಪ್ರಧಾನಿ ದೇಶದ ಜನತೆಯಲ್ಲಿ , ನನಗೆ ದೇಶದ ಆರ್ಥಿಕತೆಗಿಂತ ದೇಶದ ಜನರ ಜೀವ ಮುಖ್ಯ ಅಂದಿದ್ದರು.
ದೇಶದ ಜನರಲ್ಲಿ ಚಪ್ಪಾಳೆ ತಟ್ಟುವಂತೆ ಹೇಳಿದ್ದರು ಚಪ್ಪಾಳೆ ತಟ್ಟಿದ್ದರು. ಜಾಗಟೆ ಬಾರಿಸುವಂತೆ ಹೇಳಿದ್ದರು ಜಾಗಟೆ ಬಾರಿಸಿದರು, ದೀಪ ಉರಿಸಲು ಹೇಳಿದ್ದರು ದೀಪ ಉರಿಸಿದರು. ಮೋದಿ ಯವರು ಜನರನ್ನು ಮೂರ್ಖರನ್ನಾಗಿಸಿದರು ಇದು ಬಿಜೆಪಿ ಯವರ ಸಾಧನೆ . ಮಾರ್ಚ್ ತಿಂಗಳಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಇಪ್ಪತ್ತೈದನೇ ಸ್ಥಾನದಲ್ಲಿ ಇದ್ದ ಭಾರತ ಇದೀಗ ಮೂರನೆಯ ಸ್ಥಾನಕ್ಕೆ ಬಂದು ನಿಂತಿದೆ .ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಪ್ರಾಣಿಗಳಿಗಿಂತಲೂ ಕಡೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು, ರಾಜ್ಯದ ಜನತೆಯ ಹಿತ ಕಾಪಾಡಬೇಕಾಗಿದ್ದ, ಸರ್ಕಾರದ ಸಚಿವರುಗಳು ಪರಸ್ಪರ ಗುದ್ದಾಟದಲ್ಲಿ ತೊಡಗಿದ್ದಾರೆ . ಕೊರೊನ ಹಣ ಬಿಡುಗಡೆಯಲ್ಲು ಸಂಪೂರ್ಣ ಅವ್ಯವಹಾರ ನಡೆದಿದ್ದು ಸರಕಾರ ಜನ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ