ಕೊಡಗು ಜಿಲ್ಲೆ ಕುಶಾಲನಗರದ ಗುಡ್ಡೆಹೊಸೂರು ಪರಿಸರ ಸೀಲ್ಡೌನ್
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊರೊನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕುಶಾಲನಗರದ ದಂಡಿನಪೇಟೆ ಮತ್ತು ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ
ಬೆಂಗಳೂರು ಮೂಲಕ ಕುಶಾಲನಗರದ ದಂಡಿನಪೇಟೆಗೆ ಆಗಮಿಸಿದ್ದ 58 ವರ್ಷದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಕಂಡುಬಂದು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ಸಂದರ್ಭ ಮೃತಪಟ್ಟಿದ್ದು ಆತನಿಗೆ ಕೊರೋನ ಸೋಂಕು ಬಾಧಿಸಿರುವುದು ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಮೃತ ವ್ಯಕ್ತಿ ಮೊದಲು ತಂಗಿದ್ದ ದಂಡಿನಪೇಟೆಯ ಒಂದು ಬೀದಿ, ಪ್ರಾಥಮಿಕ ತಪಾಸಣೆಗೆ ತೆರಳಿದ್ದ ಬೈಚನಹಳ್ಳಿಯ ಖಾಸಗಿ ಆಸ್ಪತ್ರೆ ಪ್ರದೇಶವನ್ನು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಯಿತು. ಸದರಿ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಪತ್ತೆಹಚ್ಚಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‌ಕುಮಾರ್, ಆರೋಗ್ಯಾಧಿಕಾರಿ ಉದಯಕುಮಾರ್, ತಾಲೂಕು ಇಒ ಸುನಿಲ್, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಮತ್ತೊಂದು ಪ್ರಕರಣದಲ್ಲಿ ಗುಡ್ಡೆಹೊಸೂರು ಬಳಿಯ 31 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ಬಾಧಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸೋಂಕಿತ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
- Tuesday
- November 26th, 2024