
ಕೊರೋನ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣ ಸ್ತಬ್ದಗೊಂಡಿದೆ. ಹಲವು ದಿನಗಳ ಬಳಿಕ ಮತ್ತೊಮ್ಮೆ ಸರಕಾರದ ನಿರ್ದೇಶನದ ಮೇರೆಗೆ ಭಾನುವಾರ ದಿನದಂದು ಲಾಕ್ ಡೌನ್ ಜಾರಿಯಾದ ಹಿನ್ನೆಲೆ ಸುಳ್ಯ ನಗರದಲ್ಲಿ ಮೆಡಿಕಲ್ ಅಂಗಡಿಗಳು ,ಪೆಟ್ರೋಲ್ ಪಂಪ್ ಹಾಗೂ ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ ಕೇಂದ್ರಗಳು ತೆರೆದಿರುವುದು ಕಂಡುಬರುತ್ತಿಲ್ಲ. ಜನ ಸಂಚಾರ ವಿರಳವಾಗಿದ್ದು ರಸ್ತೆಗಳು ಖಾಲಿ ಖಾಲಿಯಾಗಿವೆ.


