ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿಎಂ ಭಟ್ ರವರ ನೇತೃತ್ವದಲ್ಲಿ ಸುಳ್ಯ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಇಂದು ತಾಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮೈಕ್ರೋ ಫೈನಾನ್ಸ್ ಗಳು ನೀಡಿರುವ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಯಿತು.
ಕೊರೋಣ ಮಹಾಮಾರಿ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು ,ಇದೀಗ ದಕ್ಷಿಣ ಕನ್ನಡ ಜಿಲ್ಲೆಯು ಇದರಿಂದ ಹೊರತಾಗಿ ಇಲ್ಲ. ಈ ಸಂದರ್ಭದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಬಡ ಮಹಿಳೆಯರಿಗೆ ಸಾಲ ವಸೂಲಾತಿಗೆ ತಿಳಿಸುತ್ತಿರುವುದು ಮನೆಗಳಿಗೆ ತೆರಳಿ ಬಲತ್ಕಾರದ ವಸೂಲಿಗೆ ಮುಂದಾಗುತ್ತಿರುವುದು ಖಂಡನೀಯ.ಈಗಾಗಲೇ ರಾಜ್ಯ ಸರ್ಕಾರವು ಆಗಸ್ಟ್ ತಿಂಗಳವರೆಗೆ ಯಾವುದೇ ಸಾಲ ವಸೂಲಾತಿಗೆ ಯಾರೂ ಕೂಡ ಮುಂದಾಗಬಾರದು ಎಂಬ ನಿಯಮವನ್ನು ಜಾರಿಗೆ ತಂದಿದ್ದರು ಮನ್ನಾ ಮಾಡಬೇಕೆಂದು ಆಗ್ರಹಿಸುವ ಮೈಕ್ರೋ ಫೈನಾನ್ಸ್ ಗಳ ಸಾಲವನ್ನು ವಸೂಲಿಗಾಗಿ ಸಂಸ್ಥೆಗಳ ಸಿಬ್ಬಂದಿಗಳು ಮನೆಗಳಿಗೆ ಬರುತ್ತಿರುವುದು ಅತ್ಯಂತ ಖಂಡನೀಯ ಎಂದು ಈ ಸಂದರ್ಭದಲ್ಲಿ ಸುಳ್ಯತಾಲೂಕು ಸಮಿತಿಯ ಅಧ್ಯಕ್ಷ ಎಂಬಿ ಸದಾಶಿವ ಈ ಸಂದರ್ಭದಲ್ಲಿ ಕಿಡಿಕಾರಿದರು.
ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿಎಂ ಭಟ್ ಈ ಸಂದರ್ಭದಲ್ಲಿ ಮಾತನಾಡಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸದೇ ಹೋದಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಅನುದಾನ ಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ನೀಡಿರುವ ಸಾಲಮನ್ನಾ ಯೋಜನೆಯಡಿ ತೆಗೆದುಕೊಳ್ಳಬೇಕು ಎಂದು ಎಂದು ಈ ಸಂದರ್ಭದಲ್ಲಿ ಅವರು ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸಂಚಾಲಕ ಮಂಜುನಾಥ್, ಕಾರ್ಯದರ್ಶಿ ರಮೇಶ್, ಸುಳ್ಯ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಆನಂದ ಪೈಲಾರು, ಜಯರಾಮ ಶೆಟ್ಟಿ, ಶಕುಂತಲಾ, ಸುಂದರ, ಸುಂದರಿ, ಶ್ಯಾಮಲಾ, ತಾಹಿರ, ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ತಾಲೂಕು ಸಮಿತಿ ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿ, ಜಿಲ್ಲಾ ಸಮಿತಿ ಸಂಚಾಲಕ ಎಲ್ ಮಂಜುನಾಥ್ ವಂದಿಸಿದರು.
- Thursday
- November 21st, 2024