ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ . ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಳವಾಗುತ್ತಿದೆ . ಮಾರಕ ವೈರಸ್ ವಿರುದ್ಧ ಹಗಲಿರುಳೆನ್ನದೇ ಕೊರೊನಾ ವಾರಿಯರ್ಸ್ ಗಳಂತೆಯೇ ಕೆಲಸ ಮಾಡುತ್ತಿರುವ ಪತ್ರಕರ್ತರಿಗೂ ವ್ಯಾಪಕವಾಗಿ ಸೋಂಕು ತಗುಲುತ್ತಿದೆ . ೫೫ ವರ್ಷ ಮೇಲ್ಪಟ್ಟವರು ಇದರಿಂದ ಚೇತರಿಸಿಕೊಳ್ಳಲಾಗಿದೆ ಮರಣ ಹೊಂದಿದ್ದಾರೆ . ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯ ನಡೆಸುತ್ತಿರುವ ಸೇನಾನಿಗಳಿಗೆ ಸರ್ಕಾರ ವಿಮಾ ಸೌಲಭ್ಯ ಘೋಷಿಸಿದೆ . ಆದರೆ , ಕೊರೊನಾ ಸೋಂಕು ಲೆಕ್ಕಿಸದೇ , ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸೇನಾನಿಗಳಂತೆ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಯಾವುದೇ ವಿಮೆ ನೀಡಿಲ್ಲ ಇವರಿಗೂ ವಿಮಾ ಪರಿಹಾರ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ . ಪೊಲೀಸರು , ಆಶಾ ಕಾರ್ಯಕರ್ತೆಯರ ಸಹಿತ ಕೊರೊನಾ ಸೇನಾನಿಗಳಿಗೆ ಒದಗಿಸಲಾಗಿರುವ ೩೦ ಲಕ್ಷ ರೂಪಾಯಿಯ ವಿಮಾ ಪರಿಹಾರ ಪ್ಯಾಕೇಜ್ ಅನ್ನು ಪತ್ರಕರ್ತರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ . ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ , ವಿಮಾ ಪ್ಯಾಕೇಜ್ ಪತ್ರಕರ್ತರನ್ನು ಸೇರಿಸುವಂತೆ ಮನವಿ ಮಾಡಿತ್ತು.
- Thursday
- November 21st, 2024