ಕೆ ಪಿ ಸಿ ಸಿ ಅಧ್ಯಕ್ಷ ರಾಗಿ ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ರುಗಳ ಪದಗ್ರಹಣ ಸಮಾರಂಭ ಪ್ರತಿಜ್ಞಾ ಕಾರ್ಯಕ್ರಮ ಸುಳ್ಯ ತಾಲೂಕಿನ 31 ಕಡೆಗಳಲ್ಲಿ ಯಶಸ್ವಿ ಯಾಗಿ ಕಾರ್ಯಗತ ಗೊಂಡಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ ರಾದ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ರು ಮತ್ತು ಗ್ರಾಮ ಪಂಚಾಯಿತಿ ವೀಕ್ಷಕರುಗಳಿಗೆ ಅಭಿನಂದನೆ ಮತ್ತು ಅವಲೋಕನ ಸಭೆಯನ್ನು ಜೂ 4 ರಂದು ಸುಳ್ಯ ದ ಯುವಜನ ಮಂಡಳಿ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಪ್ರತಿಜ್ಞಾ ಕಾರ್ಯಕ್ರಮದ ಸಂಪೂರ್ಣ ಚಿತ್ರ ಸಹಿತ ವರದಿಗಳ ಪುಸ್ತಕ ಬಿಡುಗಡೆ ನಡೆಯಿತು. ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ಭವಾನಿ ಶಂಕರ್ ಕಲ್ಮಡ್ಕ ಸಾಮಾಜಿಕ ಜಾಲತಾಣ ವಿಭಾಗದ ಗ್ರಾಮ ಸಂಯೋಜಕ ರಿಗೆ ಅಭಿನಂದನೆ ಸಲ್ಲಿಸಿದರು. ವಿಜೇಶ್ ಹಿರಿಯಡ್ಕ, ಚೇತನ್ ಕಜೆಗದ್ದೆ, ಲೋಕೇಶ್ ಕೇರ್ಪಡ, ರಾಜೇಶ್ ಭಟ್ ಎಲಿಮಲೆ, ಆನಂದ ಬೆಳ್ಳಾರೆ, ಬಾಪೂ ಸಾಹೇಬ್, ಬೀರಾ ಮೊಯಿದೀನ್, ಧರ್ಮಪಾಲ ಕೊಯಿಂಗಾಜೆ, ಶಶಿಧರ ಎಂ ಜೆ, ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುದೀರ್ ರೈ ಮೇನಾಲ, ಮಾಜಿ ನಗರ ಪಂಚಾಯತ್ ಅಧ್ಯಕ್ಷ ಸಂಶುದ್ದೀನ್, ಕೆ ಎಂ ಮುಸ್ತಫಾ, ಸಚಿನ್ ರಾಜ್ ಶೆಟ್ಟಿ, ತಾ.ಪಂ. ಸದಸ್ಯ ರಾದ ಅಬ್ದುಲ್ ಗಫೂರ್, ತೀರ್ಥರಾಮ ಜಾಲ್ಸೂರು, ವಿಶ್ವನಾಥ ರೈ ಕಳಂಜ , ಅನಿಲ್ ರೈ ಬೆಳ್ಳಾರೆ, ನಂದರಾಜ್ ಸಂಕೇಶ, ಮೊದಲಾದವರು ಉಪಸ್ಥಿತರಿದ್ದರು.