ಬೆಂಗಳೂರು : ಕೊರೊನಾ ಸೋಂಕಿನ ಕಾರಣದಿಂದಾಗಿ, ರಾಜ್ಯದ 5,800 ಗ್ರಾಮಪಂಚಾಯಿತಿಗಳ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರೂ, ಚುನಾವಣೆ ಮುಂದೂಡಿಕೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಇಂತಹ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ಆಕ್ಟೋಬರ್ ನಲ್ಲಿ ಪರಿಸ್ಥಿತಿ ನೋಡಿಕೊಂಡು ಚುನಾವಣೆ ಘೋಷಣೆ ಮಾಡುವುದಾಗಿ ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ರಾಜ್ಯದ 5,800 ಗ್ರಾಮಪಂಚಾಯ್ತಿಗಳಿಗೆ ಅಕ್ಟೋಬರ್ ನಲ್ಲಿ ಚುನಾವಣೆ ನಡೆಯೋದು ಫಿಕ್ಸ್ ಆದಂತೆ ಆಗಿದೆ.
ರಾಜ್ಯದ 5,800 ಗ್ರಾಮ ಪಂಚಾಯ್ತಿಗಳ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಇಂತಹ ಗ್ರಾಮ ಪಂಚಾಯ್ತಿಗಳಿಗೆ ಅಂದುಕೊಂಡಂತೆ ಆಗಿದ್ದರೇ, ಚುನಾವಣೆ ನಡೆದು, ನೂತನ ಸದಸ್ಯರ ನೇಮಕ ಕೂಡ ಆಗಬೇಕಿತ್ತು . ಆದ್ರೇ ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿಕೆ ಮಾಡಿತ್ತು . ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದರು .
ಈ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠಕ್ಕೆ , ಚುನಾವಣಾ ಆಯೋಗ ಪ್ರಮಾಣಪತ್ರವನ್ನು ಸಲ್ಲಿಸಿದ್ದು , ಈ ಪ್ರಮಾಣ ಪತ್ರದಲ್ಲಿ ನೋಟಿಫಿಕೇಷನ್ ಕಾರ್ಯ ಜುಲೈ .25 ಕ್ಕೆ ಮುಗಿಯಲಿದೆ . ಸೆಪ್ಟೆಂಬರ್ ವೇಳೆಗೆ ಮತದಾರ ಪಟ್ಟಿಯೂ ಫನಲ್ ಆಗಲಿದೆ . ಜೊತೆಗೆ 5,800 ಗ್ರಾಮ ಪಂಚಾಯ್ತಿಗಳಿಗೆ ಅಕ್ಟೋಬರ್ ಮೊದಲ ವಾರ ಚುನಾವಣೆ ಘೋಷಣೆ ಮಾಡಲಿದ್ದೇವೆ . ಅಂದಿನ ಪರಿಸ್ಥಿತಿ ಆಧಾರದ ಮೇಲೆ ಚುನಾವಣೆ ಘೋಷಣೆ ಮಾಡಲಿರುವುದಾಗಿ ಮಾಹಿತಿ ನೀಡಿದೆ . ಹೀಗಾಗಿ ರಾಜ್ಯದ 5,800 ಗ್ರಾಮ ಪಂಚಾಯ್ತಿಗಳಿಗೆ ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆ ನಡೆಯೋ ಸಾಧ್ಯತೆ ಹೆಚ್ಚಿದೆ .