
ಪೈಂಬೆಚ್ಚಾಲು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಕಲಿಯುತ್ತಿರುವ, ಪೈಂಬೆಚ್ಚಾಲಿನ ಅರ್ಹ ಕುಟುಂಬಗಳ ಇಪ್ಪತ್ತೆರಡು ವಿದ್ಯಾರ್ಥಿಗಳಿಗೆ, ಮುಸ್ಹಫ್, ಕಿತಾಬ್, ನೋಟ್ ಬುಕ್ ಗಳನ್ನೊಳಗೊಂಡ ಕಲಿಕೋಪಕರಣಗಳಿಗೆ, ಪೈಂಬೆಚ್ಚಾಲು ಎಸ್ಸೆಸ್ಸೆಫ್ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಸಹಾಯಧನ ವನ್ನು, ಜುಲೈ ೩ ರಂದು, ಬಿಜೆಎಂ ವಠಾರದಲ್ಲಿ ಮದ್ರಸ ಸದರ್ ಉಸ್ತಾದ್ ಅಲ್ ಹಾಜ್ ಬಿ.ಯಂ.ಇಸ್ಮಾಯಿಲ್ ಸಖಾಫಿ ಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ, ಎಚ್ಐಎಮ್ ಅಧ್ಯಾಪಕರಾದ ಫಾರೂಖ್ ಮದನಿ ಸೆರ್ಕಳ, ಎಸ್ ವೈಎಸ್ ಮಾಜಿ ಅಧ್ಯಕ್ಷರಾದ ಪಿ.ಬಿ.ಮೂಸಾನ್ ಹಾಜಿ, ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್, ಉಪಾಧ್ಯಕ್ಷರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ.ಎಂ. ಉಪಾಧ್ಯಕ್ಷರಾದ ಅಬ್ದುಲ್ ಅಲಿ ಪಿ. ಕಾರ್ಯದರ್ಶಿ ಟಿಎಎಚ್ಎಸ್ ಉಪಸ್ಥಿತರಿದ್ದರು.