
ಕೆ.ಎಫ್.ಡಿ.ಸಿ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ರಂಗನಾಥ್ ರವರಿಗೆ ಅಜ್ಜಾವರ ಗ್ರಾಮದ ಮೇದಿನಡ್ಕ(ಬಾರ್ಪಣೆ)ದಲ್ಲಿ , ಕಾರ್ಮಿಕರ ಪರವಾಗಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹಾಯಕ ವಿಭಾಗಿಯ ವೃವಸಾಪಕರಾದ ಶ್ರೀ ವಿಷ್ಣು ಗೌಡ, ತೋಟದ ಅಧೀಕ್ಷಕ ಶ್ರೀ ಹರೀಶ್, ಶ್ರೀಮತಿ ಪದ್ಮಾ ರಂಗನಾಥ್,ಮೇಲ್ವೀಚಾರಕರಾದ ಶ್ರೀ ಲಿಜೀ ಜೋಸೇಫ್, ಕಾರ್ಮಿಕ ಮುಖಂಡ ಶ್ರೀ ದಯಾಳ್ ಮೇದಿನಡ್ಕ ಮುಂತಾದವರು ಉಪಸ್ಥಿತರಿದ್ದರು.ಎಲ್ಲ ಮೇಸ್ತ್ರಿ ಹಾಗೂ ಕಾರ್ಮಿಕರು ಮತ್ತು ಸಾರ್ವಜನಿಕರು ಹಾಜರಿದ್ದರು.
ವಿನೋದ್ ಸ್ವಾಗತಿಸಿ ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು.