ಗುತ್ತಿಗಾರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.30 ರಂದು ಲಯನ್ಸ್ ಸೇವಾ ಭವನ ಗುತ್ತಿಗಾರಿನಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ಯ 2 ನೇ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿ ಪದಗ್ರಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಪೂರ್ವ ಉಪಾಧ್ಯಕ್ಷ ಭರತ್ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಬಾಲಕೃಷ್ಣ ಕೆ, ವಲಾಯಾಧ್ಯಕ್ಷ ಬಿಟ್ಟಿ ನೆಡುವಿಲಂ, ಕಾರ್ಯದರ್ಶಿ ಲಿಜೋ ಜೋಶ್, ಕೋಶಾಧಿಕಾರಿ ಕುಶಾಲಪ್ಪ ಟಿ ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕುಮಾರ್ ಮುಂಡೋಡಿ, ಕಾರ್ಯದರ್ಶಿಯಾಗಿ ಪ್ರವೀಣ್ ಮುಂಡೋಡಿ, ಕೋಶಾಧಿಕಾರಿ ಜಯರಾಂ ಕಡ್ಲಾರು ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಭರತ್ ಮುಂಡೋಡಿ ಸ್ವಾಗತಿಸಿ ಪ್ರವೀಣ್ ಮುಂಡೋಡಿ ವಂದಿಸಿದರು. ವೆಂಕಪ್ಪ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಜೀತ್ ಶೆಟ್ಟಿ ಅವರನ್ನು ಗುತ್ತಿಗಾರು ಲಯನ್ಸ್ ಕ್ಲಬ್ ನ ಸ್ಥಾಪಕರಲ್ಲಿ ಓರ್ವರಾದ ಧರ್ಮಪಾಲ ಹಾಗೂ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಸನ್ಮಾನಿಸಿದರು.