Ad Widget

ಬ್ಯಾಂಕ್ ಮಿತ್ರ ಯೋಜನೆಯ ಮುಖಾಂತರ ಕುಗ್ರಾಮದ ಜನಧನ್ ಖಾತೆಯ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ


ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಎಲ್ಲಾ ಫಲಾನುಭವಿಗಳ ಜನಧನ್ ಖಾತೆಯ ಅಕೌಂಟ್ ಸುಳ್ಯ ಹಾಗೂ ಗುತ್ತಿಗಾರಿನ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಇದೆ. ಇತ್ತೀಚೆಗೆ ಲಾಕ್ ಡೌನ್ ಬಳಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿ, ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಮಾಸಿಕ 500 ರೂ ಗಳ ಧನಸಹಾಯವನ್ನು ಖಾತೆಗೆ ಹಾಕಿದ್ದರು. ಆದರೇ ಈ ಹಣವನ್ನು ಪಡೆದುಕೊಳ್ಳುವುದು ಈ ಭಾಗದ ಮಹಿಳೆಯರಿಗೆ ಹರಸಾಹಸವೇ ಆಗಿತ್ತು. ಗುತ್ತಿಗಾರು ಸಿಂಡಿಕೇಟ್ ಬ್ಯಾಂಕ್ ಗೆ ಅಲೆದಾಡಿ ಈ ಹಣವೇ ಬೇಡವನ್ನುವಷ್ಟೂ ಕಷ್ಟಪಟ್ಟವರೂ ಇದ್ದಾರೆ. ಗುತ್ತಿಗಾರಿನಲ್ಲಿ 100 ಮೀ ಉದ್ದ ಕ್ಯೂ ದಿನ ಇರುತ್ತದೆ. ಹಾಗೂ ಸಿಬ್ಬಂದಿಗಳ ಸೇವೆ ಅಷ್ಟಕಷ್ಟೇ. ಅನೇಕ ಬಾರಿ ನೆಟ್ ವರ್ಕ್ ಸಮರ್ಪಕ ವಿಲ್ಲದಿರುವುದು ಇಲ್ಲಿನ ಬಹುದೊಡ್ಡ ಸಮಸ್ಯೆ. ಕೋವಿಡ್ ನಿಂದಾಗಿ ಹೋಗಿಬರಲು ಸರಿಯಾದ ಸಾರಿಗೆ ವ್ಯವಸ್ಥೆ ಗಳಿಲ್ಲ. ಈ ಎಲ್ಲಾ ಕಾರಣಗಳಿಂದ ಹಲವಾರು ಮಹಿಳೆಯರು ಕಷ್ಟ ಇದ್ದರೂ ಖಾತೆಯಿಂದ ಹಣ ಡ್ರಾ ಮಾಡುವ ಸಾಹಸಕ್ಕೆ ಹೋಗಿಲ್ಲ.

. . . . . . .

ಈ ಬಗ್ಗೆ ಗಮನಿಸಿ ಜನ್ ಧನ್ ಖಾತೆಗೆ ಬಂದ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ವಿತರಿಸುವ ಬಗ್ಗೆ ಯುವ ಮುಂದಾಳು ಉದಯ ಶಿವಾಲ ವಿಜಯ ಬ್ಯಾಂಕ್ ಮಿತ್ರ (ಭರೋಡ ಬ್ಯಾಂಕ್) ಯೋಜನೆಯ ಸಿಬ್ಬಂದಿ ಸವಿತಾ ಕೇಶವ ಕಾಯರ ಇವರನ್ನು ಕೊಲ್ಲಮೊಗ್ರಕ್ಕೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಈ ಭಾಗದ ಸುಮಾರು 125 ಮಹಿಳೆಯರಿಗೆ ಒಟ್ಟು ರೂ 75000 ಹಣ ಖಾತೆಯಿಂದ ನೇರವಾಗಿ ಫಲಾನುಭವಿಗಳಿಗೆ ತಲುಪಿತು. ಈ ಕಾರ್ಯಕ್ಕೆ ಶ್ರೀ .ಕ್ಷೇ.ಧ.ಗ್ರಾ.ಯೋಜನೆಯ ಸೇವಾಪ್ರತಿನಿಧಿ ಸಾವಿತ್ರಿ ಚಿನ್ನಪ್ಪ, ಗ್ರಾ.ಪಂ.ಪಿಡಿಓ ರವಿಚಂದ್ರನ್ ನೆರವಾದರು. ಬ್ಯಾಂಕ್ ಮಿತ್ರ ಸಿಬ್ಬಂದಿ ಸವಿತಾ ಕೇಶವ ಕಾಯರ ಖಾತೆಯಿಂದ ಹಣವನ್ನು ಫಲಾನುಭವಿಗಳಿಗೆ ವಿತರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!