
ಬಿಎಸ್ಎನ್ಎಲ್ ಅಳಿದರೇನು… ಉಳಿದರೇನು…??!!
ಬಿ ಎಸ್ ಎನ್ ಎಲ್ ಅನ್ನೋದು ಭಾರತ ಸರ್ಕಾರದ ಅಧೀನದಲ್ಲಿರುವ ಒಂದು ಟೆಲಿಕಾಂ ಸಂಸ್ಥೆ. ಬಿಎಸ್ ಎನ್ ಎಲ್ ತನ್ನ ಸೇವೆಯನ್ನು ಆರಂಭಿಸಿ, ಹಲವು ವರ್ಷಗಳ ಕಾಲ ಉತ್ತಮ ಸೇವೆಯನ್ನೂ ನೀಡಿ ಜನ ಮನ್ನಣೆಯನ್ನೂ ಗಳಿಸಿತ್ತು. ನಮ್ಮ ಸುಳ್ಯದಲ್ಲಂತೂ ಬಿಎಸ್ಎನ್ಎಲ್ ಹವಾ ಜೋರಾಗೆ ಇತ್ತು. ಈಗಲೂ ಇದೆ. ಸುಳ್ಯ ತಾಲೂಕಿನ ಕೆಲವು ಗ್ರಾಮಗಳು ಇನ್ನೂ ಬಿಎಸ್ಎನ್ಎಲ್ ನ್ನೇ ತಮ್ಮ ಸಂಭಾಷಣಾ ಮಾಧ್ಯಮವಾಗಿ ನೆಚ್ಚಿಕೊಂಡಿದ್ದಾರೆ. ಆದರೆ ಈಗ ಬಿಎಸ್ಎನ್ಎಲ್ ಮಾತ್ರ 24*7 ವ್ಯಾಪ್ತಿ ಪ್ರದೇಶದ ಹೊರಗಿದೆ,ಕರ್ಕಶ ಸದ್ದು, ಒಂದು ಸಣ್ಣ ಗುಡುಗು ಬಂದ್ರೆ ಸಾಕು ಇದು ರಿಪೇರಿ ಆಗೋದು 4 ದಿನದ ನಂತರವೇ… ಕರೆಂಟ್ ಹೋದ್ರಂತೂ ಇದಕ್ಕೆ ಜೀವಾನೇ ಇರಲ್ಲ. ಇಂಥ ಟೈಮ್ನಲ್ಲಿ ಯಾರ್ದಾದ್ರೂ ಜೀವ ಹೋಗೋ ಪರಿಸ್ಥಿತಿ ಇದ್ರಂತೂ ಮುಗಿದೇ ಹೋಯ್ತು. ಅವನಿಗೆ ಚಟ್ಟವೇ ಗತಿ. ಯಾಕಂದ್ರೆ ಆಂಬ್ಯುಲೆನ್ಸ್ ಗೆ ಫೋನ್ ಮಾಡ್ಲಿಕ್ಕೆ ಈ ಬಿಎಸ್ಎನ್ಎಲ್ ಗೇ ಜೀವನೇ ಇರಲ್ಲ. ಪಾಪ ಅವ್ರಿಗೆ ಬೇರೆ ಯಾವ ನೆಟ್ವರ್ಕ್ ಗಳೂ ಸಿಗಲ್ಲ. ಇಂಥ ಸಮಯದಲ್ಲಿ ಸರ್ಕಾರಿ ಟೆಲಿಕಾಂ ಸಂಸ್ಥೆ ಜನರ ನೆರವಿಗೆ ನಿಲ್ಲಬೇಕು. ಅದುಬಿಟ್ಟು ಜನರೇ ಇದರ ಸಹವಾಸನೇ ಬೇಡ ಅನ್ನೋ ಮನಸ್ಥಿತಿಗೆ ಬರುವಂತೆ ಬಿಎಸ್ಎನ್ಎಲ್ ನಡೆದುಕೊಳ್ಳಬಾರದು. ಈ ಟೆಲಿಕಾಂ ಸಂಸ್ಥೆ ಮೊದಲೇ ಇವತ್ತೋ ನಾಳೆನೋ ಅನ್ನೊ ಸ್ಥಿತಿಯಲ್ಲಿದೆ. ಇಂಥ ಅಂತ್ಯ ಕಾಲದಲ್ಲಾದರೂ ಒಂದು ಉತ್ತಮ ಸೇವೆ ನೀಡೋ ಮನಸ್ಸು ಮಾಡಿದ್ರೆ ಬಿಎಸ್ಎನ್ಎಲ್ ಜಾಸ್ತಿದಿನ ಬದುಕಬಹುದೇನೋ. ಇಲ್ಲ ಅಂದ್ರೆ ಸುಳ್ಯದ ನಾಯಕರುಗಳು ಈ ಬಿಎಸ್ಎನ್ಎಲ್ಗೆ ಎಳ್ಳು ನೀರು ಬಿಟ್ಟು ಅಂಬಾನಿಯ ಜಿಯೋವನ್ನೋ ಅಥವಾ ಭಾರತಿ ಮಿತ್ತೆಲ್ ಅವರ ಏರ್ ಟೆಲ್ ನ್ನು ಗಟ್ಟಿಮಾಡಿ ಜನರ ಸಂಪರ್ಕಮಾರ್ಗವನ್ನು ಉತ್ತಮಪಡಿಸಿದರೆ ಜನ ನೆಮ್ಮದಿಯಿಂದಿರಬಹುದು. ಅಂದಹಾಗೆ ಈ 4ಜಿ ಕಾಲದಲ್ಲಿ ಸರಿಯಾಗಿ 2ಜಿ ನೂ ಸಿಗದ, ಜೀವಾನೇ ಇಲ್ಲದಂತಿರುವ ಈ ಬಿಎಸ್ಎನ್ಎಲ್ ಅಳಿದರೇನು ಉಳಿದರೇನು.. ಸುಳ್ಯದ ಮಹಾಜನರೇ ತೀರ್ಮಾನಿಸಬೇಕು