- Saturday
- September 12th, 2026
ದೇವಚಳ್ಳ ಗ್ರಾಮದ ಧರ್ಮಪಾಲ ಕರಂಗಲ್ಲು ರವರು ಜೂ.23ರಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 72 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಚಂದ್ರಾವತಿ, ಪುತ್ರ ಕಿಶೋರ್, ಪುತ್ರಿಯರಾದ ಭಾರತಿ, ರೇಖಾ ಹಾಗೂ ಸಹೋದರರಾದ ಪುರುಷೋತ್ತಮ ಕರಂಗಲ್ಲು, ಮೋಹನ ಕರಂಗಲ್ಲು, ಸಹೋದರಿಯರಾದ ಕುಸುಮಾವತಿ ಅತ್ಯಾಡಿ, ಬಾಲಕಿ ಕಜ್ಜೋಡಿ, ಚಂದ್ರಪ್ರಭಾ ಮೋಂಟಡ್ಕ, ಗೀತಾ ಚೆಮ್ನೂರು ಮತ್ತು ಸೊಸೆ, ಅಳಿಯಂದಿರು,...
ದೇಲಂಪಾಡಿ ಗ್ರಾಮದ ರೆಂಜಾಳ ಗೋಪಾಲ ಕೃಷ್ಣ ನಾಯಕ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಜೂ. 22 ರಂದು ನಿಧನರಾದರು. ಮೃತರಿಗೆ 77 ವರ್ಷ ವಯಸ್ಸಾಗಿದ್ದು, ಪತ್ನಿ ಸತ್ಯಭಾಮ ಹಾಗೂ ಪುತ್ರರಾದ ವಿನಯಚಂದ್ರ, ಪ್ರಶಾಂತ್ ಹಾಗೂ ಪುತ್ರಿ ವೀಣಾ ಹಾಗೂ ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ. ವರದಿ (ವೆಂಕಟೇಶ್)
ದೇವಚಳ್ಳ ಗ್ರಾಮದ ಅಡ್ಡನಪಾರೆ (ಪುಳಿಕುಕ್ಕು) ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಜೂ.18) ನಿಧನರಾದರು. ಶಿಕ್ಷಕರಾಗಿ ಸೇವೆ ದರ್ಬೆತಡ್ಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು ಕಂದ್ರಪ್ಪಾಡಿ, ದೊಡ್ಡತೋಟ, ಅರಂತೋಡು, ಗಾಂಧಿನಗರ ಹಾಗೂ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಕಿಸಿ ನಿವೃತ್ತರಾಗಿದ್ದರು.ಕೆಲ ವರ್ಷದಿಂದ ಪುತ್ತೂರಿನ ಕಲ್ಚರ್ಪೆಯಲ್ಲಿ ನೆಲೆಸಿದ್ದ ಅವರು...
ಗುತ್ತಿಗಾರು ನಾಲ್ಕೂರು ಗ್ರಾಮದ ಸಾಲ್ತಾಡಿ ಹೊಸಮನೆ ಪಾರೆಮಜಲು ದಿl ಕೂಸಪ್ಪ ಗೌಡರ ಪತ್ನಿ ಜಾನಕಿ(80) ಜೂ.11 ರಂದು ವಯೋಸಹಜವಾಗಿ ನಿಧನರಾಗಿದ್ದಾರೆ. ಮೃತರು ನಾಟಿ ವೈದ್ಯೆಯಾಗಿದ್ದು, ಹೆಣ್ಣು ಮಕ್ಕಳ ಬಾಣಂತಿ ನೋಡಿಕೊಳ್ಳುತ್ತಿದ್ದರು. ಮೃತರು ಪುತ್ರಿಯರಾದ ಲೀಲಾವತಿ ಆನಂದ ಕಣಿಲೆಗುಂಡಿ , ಧರ್ಮಾವತಿ ಚಂದ್ರಶೇಖರ ಪಾಲೆಪ್ಪಾಡಿ, ಸೊಸೆ ಮೋಹಿನಿ ರೋಹಿತಾಶ್ವ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸುಳ್ಯ, ಜೂ.12: ಜೂನ್ 10ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ರಸ್ತೆಯ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಸಂಭವಿಸಿದ್ದ ಸ್ಕೂಟಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿ.ಎ. ಸುಬ್ರಹ್ಮಣ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 12ರಂದು ಮೃತಪಟ್ಟಿದ್ದಾರೆ. ಜೂನ್ 10ರಂದು ಸಂಜೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವು ಸುಬ್ರಹ್ಮಣ್ಯ ಅವರಿಗೆ ಢಿಕ್ಕಿ ಹೊಡೆದಿತ್ತು....
ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ್ ಭಾಗವತ್ ರವರು ಜೂ.11 ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅಧ್ಯಾಪಕ ವೃತ್ತಿಯಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು ಸಹಾಯಕ ಪ್ರಾಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಹಾಗೂ ಉಪನ್ಯಾಸಕರಾಗಿ ಕಡಬ, ಗುತ್ತಿಗಾರು, ದುಗ್ಗಲಡ್ಕ ಹಾಗೂ ಪಂಜ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 22 ವರ್ಷಗಳ ಹಿಂದೆ ನಿವೃತ್ತಿಯನ್ನು...
ಕಳಂಜ ಗ್ರಾಮದ ಅಯ್ಯನಕಟ್ಟೆ ನಿವಾಸಿ ಇಬ್ರಾಹಿಂ ಅಜಪಿಲ(86) ಎಂಬುವವರುಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂನ್ 04 ರಂದು ನಿಧನರಾದರು. ಅವರು ಪುತ್ರರಾದ ಮುಹಮ್ಮದ್, ಅಬ್ದುಲ್ ಖಾದರ್, ಅಬೂಬಖರ್ ಸೆಲೆಖ್ಟ್ ಹಾಗೂ ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾಮದ ಉರುಂಡೆ ನಾರಾಯಣ ಗೌಡರು ಮೇ 30 ರಂದು ಅಲ್ಪಕಾಲ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಪುತ್ರ ವಸಂತ, ಪುತ್ರಿಯರಾದ ದಮಯಂತಿ ಮತ್ತು ಗಿರಿಜಾ, ಸೊಸೆ ನಳಿನಿ ಹಾಗೂ ಮೊಮ್ಮಮ್ಮಕ್ಕಳನ್ನು ಅಗಲಿದ್ದಾರೆ..
ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದಲ್ಲಿ ವಾಸವಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ಪ್ರಸಾದ್ ಕಳಿಗೆ(69) ಗುರುವಾರ ನಿಧನರಾದರು. ಅವರು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಸಹೋದರ, ಸಹೋದರಿ, ಬಂಧು-ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...
All posts loaded
No more posts
